ಮಂಗಳೂರು: ಡಾ.ಪಿ.ದಯಾನಂದ ಪೈ -ಪಿ ಸತೀಶ ಪೈ ಸರ್ಕಾರಿ ಪ್ರಥಮದರ್ಜೆಕಾಲೇಜು ಮಂಗಳೂರು ರಥಬೀದಿ ಇಲ್ಲಿ ದಿನಾಂಕ 13-07-2018 ರಂದು ಪದವಿ ವಿದ್ಯಾರ್ಥಿಗಳಿಗಾಗಿ ಕಾಲೇಜಿನವೃತ್ತಿ ಮಾರ್ಗದರ್ಶನ ಮತ್ತುಉದ್ಯೋಗ ಕೋಶದ ಆಶ್ರಯದಲ್ಲಿ ಬಂಡವಾಳ ಮಾರುಕಟ್ಟೆಯ ವಿವಿಧ ಚಟುವಟಿಕೆಗಳ ಬಗ್ಗೆ ಮುಂಬೈ ಷೇರು ಮಾರುಕಟ್ಟೆಯ ಸಹಯೋಗದೊಂದಿಗೆ ವಿಶೇಷ ಉಪನ್ಯಾಸಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಉಪನ್ಯಾಸಕಾರ್ಯಕ್ರಮದಲ್ಲಿ ಬಂಡವಾಳ ಮಾರುಕಟ್ಟೆಯ ಬಗ್ಗೆ ವಿಷಯತಜ್ಞರಾದ ಶ್ರೀ ಕೆ ರಾಮಚಂದ್ರ ಭಟ್‌ರವರು ಷೇರು ಮಾರುಕಟ್ಟೆಗಳ ಚಟುವಟಿಕೆ ಹಾಗೂ ವಿವಿಧ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ವಿಧಾನಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಈ ಸಮಾರಂಭದಲ್ಲಿ ಡಾ.ಶಿವರಾಮ ಪಿ., ಪ್ರಭಾರ ಪ್ರಾಂಶುಪಾಲರುತಮ್ಮಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದುಆಧುನಿಕಯುಗದಲ್ಲಿಒಂದು ಹೊಸ ಉದ್ಯೋಗಅವಕಾಶವಾಗಿದೆ ಹಾಗೂ ಮುಖ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ವಿನಿಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಹಾಗೂ ತಾಳ್ಮೆಯ ಬಗ್ಗೆ ವಿವರಿಸಿದರು.
ಈ ಸಮಾರಂಭದಲ್ಲಿವೃತ್ತಿ ಮಾರ್ಗದರ್ಶನ ಮತ್ತುಉದ್ಯೋಗಕೋಶದಸಂಚಾಲಕರಾದಪ್ರೊ.ಗೀತಾಎಂ.ಎಲ್, ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ.ಅಪ್ಪು, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದಡಾ.ನಾಗಪ್ಪಗೌಡ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ರವಿಕುಮಾರ ಎಂ.ಪಿ ಹಾಗೂ ಅತಿಥಿಉಪನ್ಯಾಸಕರಾದ ಕು. ಜಯಲಕ್ಷ್ಮಿ ಇವರುಗಳು ಪಾಲ್ಗೊಂಡಿದ್ದರು.
ಅ೦ತಿಮ ಬಿ.ಕಾಂ ವಿದ್ಯಾರ್ಥಿನಿಯಾದ ಕು.ಸ್ವಾತಿ ಸ್ವಾಗತಿಸಿದರು. ಹಾಗೂ ಅ೦ತಿಮ ಬಿ.ಕಾಂ ವಿದ್ಯಾರ್ಥಿಯಾದ ವಿನಯ್‌ಇವರು ವಂದನಾರ್ಪಣೆಗೈದರು.-
Click this button or press Ctrl+G to toggle between Kannada and English