ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನ ನಾಟಕ ಸಂಘದ ವಿದ್ಯಾರ್ಥಿಗಳಿಂದ ದಿನಾಂಕ 12 ಜುಲೈ 2018ರಂದು ಗುರುವಾರ, ಸಂಜೆ 6.30ಕ್ಕೆ ಕಾಲೇಜಿನ ಎಲ್.ಸಿ.ಆರ್.ಐ. ಹಾಲ್ನಲ್ಲಿ ’ಬಿರುಗಾಳಿ’ ಎಂಬ ನಾಟಕ ಪ್ರದರ್ಶನ ನಡೆಯಿತು. ಷೇಕ್ಸ್ಪಿಯರ್ ಮಹಾಕವಿಯ ’ಟೆಂಪೆಸ್ಟ್’ ನಾಟಕದ ರೂಪಾಂತರವಾದ, ಕುವೆಂಪುರವರ ರಚನೆಯ ಈ ನಾಟಕವನ್ನು ಜಯಶ್ರೀ ಇಡ್ಕಿದುರವರು ನಿರ್ದೇಶಿಸಿದ್ದಾರೆ.
ರೆ. ಫಾ. ಆಲ್ವಿನ್ ಸೆರಾವೊ, ಪ್ರಾಂಶುಪಾಲರು, ಪದುವಾ ಕಾಲೇಜ್ ಆಫ್ ಕಾಮರ್ಸ್ ಎಂಡ್ ಮ್ಯಾನೇಜ್ಮೆಂಟ್, ನಂತೂರು, ಶ್ರೀ ಪ್ರದೀಪ್ಚಂದ್ರ ಕುತ್ಪಾಡಿ, ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಕಲಾವಿದರು ಹಾಗೂ ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ., ಪ್ರಾಂಶುಪಾಲರು, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಂಗಭೂಮಿಯಲ್ಲಿ ಕಲಾವಿದರು ಬಳಿಯುವ ಬಣ್ಣ ಅವರ ಮುಖವನ್ನು ಮಾತ್ರವಲ್ಲ, ನೋಡುವ ಪ್ರೇಕ್ಷಕನ ಮನಸ್ಸನ್ನು ಕೂಡ ರಂಗಾಗಿಸುತ್ತದೆ. ಹೌದು ರಂಗಭೂಮಿಗೆ ಇಂತಹ ಒಂದು ಅತ್ಯದ್ಭುತವಾದ ಶಕ್ತಿಯಿದೆ.
ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಪಠ್ಯೇತರ ವಿಷಯಗಳಿಗೂ ವಿಶೇಷ ಪ್ರಾಧಾನ್ಯತೆ ನೀಡುತ್ತದೆ. ಕಾಲೇಜಿನಲ್ಲಿ ಹಾಗೂ ಹೊರಗಡೆ ವಿದ್ಯಾರ್ಥಿಗಳಿಗೆ ತಮ್ಮಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶವನ್ನು ನೀಡಲಾಗುತ್ತದೆ. ಪ್ರಾಂಶುಪಾಲರಾದ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ.ರವರು ರಂಗಚಟುವಟಿಕೆ, ಕಲೆ, ಸಂಗೀತ, ನೃತ್ಯ ಮುಂತಾದವುಗಳು ಕಾಲೇಜಿನಲ್ಲಿ ನಿರಂತರವಾಗಿ ನಡೆಯಲು ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಕಾಲೇಜಿನಲ್ಲಿಯೇ ಪೂರ್ಣಪ್ರಮಾಣದ ರಂಗಚಟುವಟಿಕೆ ಹಾಗೂ ಇತರ ಕಾರ್ಯಕ್ರಮಗಳಿಗೆ ಬೇಕಾದಂತಹ ಎಲ್ಲಾ ಸವಲತ್ತುಗಳನ್ನು ನೀಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಪ್ರೋತ್ಸಾಹಿಸುತ್ತಿದ್ದಾರೆ.
ಸಂತ ಅಲೋಶಿಯಸ್ ಕಾಲೇಜು ನಾಟಕ ಸಂಘ ಕಳೆದ ಹಲವಾರು ವರ್ಷಗಳಿಂದ ರಂಗಚಟುವಟಿಕೆಗಳಲ್ಲಿ ಬಹಳ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಕಾಲೇಜಿನಲ್ಲಿ ಹಲವಾರು ನಾಟಕಗಳು ಪ್ರದರ್ಶನಗೊಳ್ಳಲು ಸಹಕಾರಿಯಾಗಿದೆ. ಈ ಸಂಘದ ಮೂಲಕ ಹಲವಾರು ರಂಗಕಲಾವಿದರು ಹುಟ್ಟಿಕೊಂಡಿದ್ದಾರೆ. ಅದಕ್ಕೆಲ್ಲ ಕಲಶಪ್ರಾಯವೆಂಬಂತೆ ಕಳೆದ ವರ್ಷದ ನಾಟಕ ’ಅಗ್ನಿವರ್ಣ’ ಜಿಲ್ಲಾ, ವಲಯ ಮಟ್ಟದಲ್ಲದೆ ರಾಜ್ಯ ಮಟ್ಟದಲ್ಲೂ ಪ್ರಶಸ್ತಿಯನ್ನು ಗಳಿಸುವುದರ ಜೊತೆಗೆ ಪ್ರಸಂಶೆಗೆ ಪಾತ್ರವಾಗಿದೆ.
Click this button or press Ctrl+G to toggle between Kannada and English