ಉಡುಪಿ ಸಂತೆಕಟ್ಟೆ ಬಳಿ ಭೀಕರ ಅಫಘಾತ, ಎರಡು ಬಲಿ

2:33 PM, Saturday, July 14th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Santekatte accidentಉಡುಪಿ : ಹುಂಡೈ ವೆರ‍್ನಾ ಕಾರು ಮತ್ತು ಟಾಟಾ 407 ಟೆಂಪೋಗಳ ನಡುವೆ ಉಡುಪಿ ಸಂತೆಕಟ್ಟೆ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಫಘಾತದಲ್ಲಿ  ಕಾರು ಚಾಲಕ ಮತ್ತು ಟೆಂಪೋಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಬ್ರಹ್ಮಾವರ ಕಡೆಯಿಂದ ಉಡುಪಿಗೆ ಬರುತ್ತಿದ್ದ ಟೆಂಪೋ KA 20 6958 ಮತ್ತು ಉಡುಪಿಯಿಂದ ಸಂತೆಕಟ್ಟೆ ಕಡೆ ವಿರುದ್ದ ದಿಕ್ಕಿನಿಂದ ಹೋಗುತ್ತಿದ್ದ KA 12 Z 1523 ನಂಬರಿನ  ಕಾರಿಗೆ ಟೆಂಪೋ ಅತೀ ವೇಗದಿಂದ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳ ಚಾಲಕರು ಕೊನೆಯುಸಿರೆಳೆದಿದ್ದಾರೆ.

ಕಾರು ಚಾಲಕ ಶ್ರವಣ್ ಗಣಪತಿ ಹೆಗ್ಡೆ (30) ಎಂದು ಗುರುತಿಸಲಾಗಿದೆ. ಕಾರು ಆತನ ಸ್ನೇಹಿತ ಮಣಿಪಾಲದ ಆಸ್ಪತ್ರೆಯ ಮಕ್ಕಳ ವೈದ್ಯರದ್ದು ಎಂದು ಹೇಳಲಾಗಿದೆ. ಟೆಂಪೋ ಚಾಲಕ ನಿಟ್ಟೂರು ನಿವಾಸಿ  ಅಶೋಕ್ (55) ಚಿತ್ತರಂಜನ್ ಸರ್ಕಲ್‌ನಲ್ಲಿ ಬಾಡಿಗೆ ಮಾಡುತ್ತಿದ್ದರು.

ಉಡುಪಿ ನಗರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Santekatte accident

Santekatte accident

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English