ವಿಶ್ವ ಕೊಂಕಣಿ ಕೇಂದ್ರ ‘ಕ್ಷಮತಾ ಅಕಾಡೆಮಿ’ ಮೂರನೇ ಶಿಬಿರ ಸಮಾರೋಪ ಸಮಾರಂಭ

5:39 PM, Monday, July 16th, 2018
Share
1 Star2 Stars3 Stars4 Stars5 Stars
(No Ratings Yet)
Loading...

konkaniಮಂಗಳೂರು: ವಿಶ್ವ ಕೊಂಕಣಿ ವಿದ್ಯಾರ್ಥಿವೇತನನಿಧಿ ವತಿಯಿಂದ ಇಂಜಿನಿಯರಿಂಗ ಮತ್ತು ಮೆಡಿಕಲ್ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಹಾಗೆಯೇ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ ಕ್ಷಮತಾ ಅಕಾಡೆಮಿ ಯೋಜನೆಯಡಿಯಲ್ಲಿ ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತದೆ. ಈ ಸಾಲಿನ ಕ್ಷಮತಾ ಅಕಾಡೆಮಿ ಮೂರನೇ ಶಿಬಿರದ ಸಮಾರೋಪ ಸಮಾರಂಭ ದಿ. 15-07-18 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ ಡೆಪ್ಯುಟಿ ಜನರಲ್ ಮ್ಯಾನೇಜರ್ ಖ್ಯಾತ ಲೆಕ್ಕ ಪರಿಶೋಧಕ ಶ್ರೀ ಯು. ಸುರೇಂದ್ರ ನಾಯಕ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಶಿಬಿರದ ಸದುಪಯೋಗ ಹಾಗೂ ಕಾರ್ಯನಿರ್ವಹಣೆ ಮತ್ತು ಸಂವಹನ ನೈಪುಣ್ಯ ವಿವಿಧ ವಿಷಯಗಳಲ್ಲಿ ತಿಳುವಳಿಕೆ ನೀಡಿದರು.

ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ (ದಿಲ್ಲಿ) ಯ ಕೊಂಕಣಿ ಭಾಷಾ ಉಪ ಸಮಿತಿಯ ಸಂಚಾಲಕ ಶ್ರೀ ಭೂಷಣ ಭಾವೆ, ಖ್ಯಾತ ಲೇಖಕಿ ಹಾಗೂ ಅನುವಾದಕಿ ಬೆಂಗಳೂರು ಡಾ. ಗೀತಾ ಶೆಣೈ, ವಿಶ್ವ ಕೊಂಕಣಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಎಂ. ಆರ್. ಕಾಮತ್ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳು ಶಿಬಿರದಲ್ಲಿ ಪಡೆದ ಅನುಭವಗಳನ್ನು ಹಾಗೂ ನಡೆದ ವಿವಿಧ ಚಟುವಟಿಕೆಗಳ ಬಗ್ಗೆ ಅಭಿಪ್ರಾಯ ತಿಳಿಸಿದರು. ಮತ್ತು ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English