ಭಟ್ಕಳ : ಸುಮಾರು 40 ವರ್ಷಗಳ ಹಳೆಯದಾದ ಭಟ್ಕಳ ಬಸ್ ನಿಲ್ದಾಣದ ಕಟ್ಟಡ ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ.
ಈ ಹಿಂದೆಯೆ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಅಲ್ಲಿನ ಮಳಿಗೆಗಳನ್ನು ಖಾಲಿ ಮಾಡುವಂತೆ ಭಟ್ಕಳ ಬಸ್ ಘಟಕದಿಂದ ಅಂಗಡಿಕಾರರಿಗೆ ನೋಟಿಸ್ ನೀಡಲಾಗಿತ್ತು. ಹಲವು ದಿನಗಳ ಹಿಂದೆ ಅಂಗಡಿಕಾರರು ಅಂಗಡಿಗಳನ್ನು ಖಾಲಿ ಮಾಡಿದ್ದರು .
ರವಿವಾರ ಕಟ್ಟಡದ ಗೋಡೆಯೊಂದು ಕುಸಿದಿತ್ತು. ಇದನ್ನು ಕಂಡ ಡಿಪೋ ಮ್ಯಾನೇಜರ್ ಅಲ್ಲಿ ಜನಸಂಚಾರವನ್ನು ನಿಷೇಧಿಸಿದ್ದರು. ಸದ್ಯ ಕಟ್ಟಡ ಕುಸಿಯುಯುತ್ತಿರುವ ವೀಡಿಯೊ ವೈರಲ್ ಆಗಿದೆ.
ಬಸ್ ನಿಲ್ದಾಣದ ಕಟ್ಟಡ ಕುಸಿಯುತ್ತಿರುವ ವೀಡಿಯೊ ವೈರಲ್ ಆಗುತ್ತಿದ್ದಂತೆ ತಹಶೀಲ್ದಾರ್ ವಿ.ಎನ್. ಬಾಡಕರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡಿಸಿದ್ದಾರೆ. ಇಂಜಿನೀಯರ್ಸ್ ಗಳ ಸಮ್ಮುಖದಲ್ಲಿ ಸಂಪೂರ್ಣ ಕಟ್ಟಡವನ್ನು ಕೂಡಲೇ ಬೀಳಿಸಬೇಕೆಂಬ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 40 ವರ್ಷಗಳ ಹಳೆಯದಾದ ಕಟ್ಟಡವನ್ನು ಸಾರಿಗೆ ಇಲಾಖೆ ನವೀಕರಿಸುತ್ತಿದ್ದು ಹೊಸ ಬಸ್ ನಿಲ್ದಾಣ ಕಾಮಾಗಾರಿ ಆರಂಭಗೊಂಡಿದೆ.
Click this button or press Ctrl+G to toggle between Kannada and English