ಇಂದು ಸಂಜೆ ಎಂ.ಎನ್​.ವ್ಯಾಸರಾವ್​ ಅವರ ಅಂತ್ಯ ಸಂಸ್ಕಾರ

1:49 PM, Tuesday, July 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

m-n-vyasraoಬೆಂಗಳೂರು: ಗೀತ ರಚನೆಕಾರ ಕವಿ, ಕಥೆಗಾರ, ಕಾದಂಬರಿಕಾರ ಎಂ.ಎನ್‌. ವ್ಯಾಸರಾವ್‌ ಭಾನುವಾರ ನಿಧನರಾಗಿದ್ದು, ಇಂದು ಅವರ ಅಂತಿಮ ಸಂಸ್ಕಾರ ನೆರವೇರಲಿದೆ.

ಗೀತ ರಚನೆಕಾರ ಕವಿ, ಕಥೆಗಾರ, ಕಾದಂಬರಿಕಾರ ಎಂ.ಎನ್‌. ವ್ಯಾಸರಾವ್‌ ಭಾನುವಾರ ನಿಧನರಾಗಿದ್ದು, ಇಂದು ಅವರ ಅಂತಿಮ ಸಂಸ್ಕಾರ ನೆರವೇರಲಿದೆ.

ಇಂದು ಸಂಜೆವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಂ.ಎನ್. ವ್ಯಾಸರಾವ್ ಬ್ಯಾಂಕಿಂಗ್ ವೃತ್ತಿಯಲ್ಲಿದ್ದರೂ ಸಾಹಿತ್ಯ, ಕವನ, ಭಾವಗೀತೆಗಳನ್ನು ಬರೆಯುವ ಮೂಲಕ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪುಟ್ಟಣ್ಣ ಕಣಗಾಲ್ ಅವರ ಸಿನಿಮಾಗಳಿಗೆ ಇವರು ಹೆಚ್ಚಾಗಿ ಗೀತ ರಚನೆ ಮಾಡಿದ್ದರು. ವ್ಯಾಸರಾವ್ ಬರೆದ ‘ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು’ ಹಾಡನ್ನು ಶುಭಮಂಗಳ ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಈ ಹಾಡು ಇಂದಿಗೂ ಎಲ್ಲರಿಗೂ ಬಹಳ ಇಷ್ಟ.

ಅಂತಿಮ ದರ್ಶನಕ್ಕೆ ಕಲಾವಿದರ, ಸಾಹಿತಿಗಳ ದಂಡು ಹರಿದುಬರಲಿದೆ. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ, ಸೇತುರಾಂ, ವೈ.ಕೆ. ಮುದ್ದುಕೃಷ್ಣ, ನಿರ್ದೇಶಕ ಸಿ.ವಿ. ಶಿವಶಂಕರ್, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಸಾಹಿತ್ಯಾಭಿಮಾನಿಗಳು ಹಾಗೂ ಚಿತ್ರನಟ/ನಟಿಯರು ವ್ಯಾಸರಾವ್ ಅಂತಿಮ ದರ್ಶನ ಪಡೆಯಲಿದ್ದಾರೆ. ಸಂಜೆ 5 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English