ಎ. ಕೃಷ್ಣಪ್ಪ ಸಾವಿಗೆ ದೇವೇಗೌಡರೇ ಕಾರಣ… ಕಿಡಿ ಹೊತ್ತಿಸಿದ ಮಾಜಿ ಸಂಸದರ ಆರೋಪ

4:11 PM, Tuesday, July 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

krishnappaತುಮಕೂರು: ಕಳೆದ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ ಮೃತಪಟ್ಟಿದ್ದರು. ಅವರ ಸಾವಿನ ಏನ್ ಕಾರಣ ಅನ್ನೋದರ ಕುರಿತು ಮಾಜಿ ಸಂಸದ ಜಿ.ಎಸ್ ಬಸವರಾಜು ಗಂಭೀರ ಆರೋಪ ಮಾಡಿದ್ದಾರೆ.

ಹೌದು.., ಇಂದು ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರೇ ಎ ಕೃಷ್ಣಪ್ಪ ಸಾವಿಗೆ ಕಾರಣವೆಂದು ದೂರಿದ್ದಾರೆ.

“ನನ್ನ ಮನೆ ಹಾಳಾಗೋಯ್ತು, ದೇವೇಗೌಡರು ನನ್ನ ಮನೆ ಹಾಳು ಮಾಡಿದರು ಎಂದು ಎ.ಕೃಷ್ಣಪ್ಪ ನನ್ನಲ್ಲಿ ಅಳಲು ತೋಡಿಕೊಂಡಿದ್ದರು. ಹೀಗಾಗಿ ಅವರ ಸಾವಿಗೆ ದೇವೇಗೌಡರೇ ಕಾರಣವಾಗಿದ್ದಾರೆ. ದೇವೇಗೌಡರು ಎ. ಕೃಷ್ಣಪ್ಪ ಅವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಿ ಯಜ್ಞಪಶು ಮಾಡಿದ್ದರು. ಜಾತಿ ಆಧಾರದ ಮೇಲೆ ಅಭ್ಯರ್ಥಿ ಮಾಡಿದ್ದರೋ ಗೊತ್ತಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಜೆಡಿಎಸ್ನ ಐವರು ಶಾಸಕರು ಪ್ರಚಾರ ನಡೆಸದೆ ಚುನಾವಣೆ ವೇಳೆ ಕಣ್ಮರೆಯಾಗಿದ್ದರು ಎಂದು ಬಸವರಾಜು ವಾಗ್ದಾಳಿ ನಡೆಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English