ಬೆಳ್ತಂಗಡಿ : ಸಾರ್ವಜನಿಕರ ದೂರಿನಂತೆ ಮಂಗಳವಾರ ಬೆಳಗ್ಗೆ ಬೆಳ್ತಂಗಡಿ ತಾಲೂಕು ಕಚೇರಿಗೆ ಶಾಸಕರಾದ ಹರೀಶ್ ಪೂಂಜ ರವರು ಧಿಡೀರ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕೆಲವೇ ಕೆಲವು ಅಧಿಕಾರಿಗಳು ಹಾಜರಿದ್ದುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಸಾರ್ವಜನಿಕರು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಾಮಾನ್ಯ ಕೆಲಸಗಳಿಗೂ ತಿಂಗಳು ಗಟ್ಟಲೆ ಕಾದು ಹತಾಶರಾಗಿ ಶಾಸಕರ ಮೊರೆಹೋಗಿದ್ದರು.
ಬೆಳ್ತಂಗಡಿ ತಾಲುಕು ಕಛೇರಿಯಲ್ಲಿ ಒಬ್ಬ ಬಡವ 94ಸಿಗೆ ಅರ್ಜಿ ಹಾಕಿದರೂ ಸಿಬ್ಬಂದಿಗಳು ಹಣ ಕೇಳುತ್ತಾರೆ. ವಿದ್ಯಾಭ್ಯಾಸ, ಜಾತಿ ಆದಾಯ ಪತ್ರಗಳಿಗೂ ಹಣ ಕೇಳುತ್ತಾರೆ. ಹಣ ಕೊಡದಿದ್ದರೆ ತಿಂಗಳು ಗಟ್ಟಲೆ ಕಾಯಿಸುತ್ತಾರೆ ಎಂಬ ದೂರು ಶಾಸಕರ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ಜುಲೈ 17 ರಂದು ಶಾಸಕರು ಭೇಟಿ ನೀಡಿದಾಗ ತಾಲುಕು ಕಛೇರಿಯ35 ಸಿಬ್ಬಂದಿಗಳಲ್ಲಿ ಕೇವಲ 10 ಮಂದಿ ಹಾಜರಿದ್ದರು. ಹಾಜರಾತಿ ಇಲ್ಲದ ಸಿಬ್ಬಂದಿಗಳಿಗೆ ಗೈರುಹಾಜರಿ ಹಾಕುವಂತೆ ತಹಸೀಲ್ದಾರರಿಗೆ ನೋಟಿಸು ನೀಡುವಂತೆ ಸೂಚಿಸಿದರು.
ಹರೀಶ್ ಪೂಂಜ ದೂರುದಾರರಿಗೆ ತಾನು ಕೊಟ್ಟ ಮಾತಿನಂತೆ ಕಚೇರಿಯಲ್ಲಿ ತಾನೇ ಕುಳಿತು ಕೆಲಸ ಪರಿಶೀಲಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Click this button or press Ctrl+G to toggle between Kannada and English