ಮಂಗಳೂರು : ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕಂದಾಯಭವನ ಕಟ್ಟಡ ಆವರಣ ಗೋಡೆ ಕುಸಿದು, ಎರಡು ಅಂತಸ್ತಿನ ಕಂದಾಯಭವನ ಕಟ್ಟಡವೂ ಸಹ ಕುಸಿದು ಬೀಳುವ ಅಪಾಯದಲ್ಲಿದೆ.
ಕಂದಾಯ ಭವನ 2017 ರಲ್ಲಿ ಕೇವಲ ತಳ ಅಂತಸ್ತಿನಲ್ಲಿತ್ತು. ಮತ್ತೆ ಕಂದಾಯ ಇಲಾಖೆಯ ಕೆಲಸಗಾರರ ಅಶೋಸಿಯೇಶನ್ ಜಿಲ್ಲಾಧಿಕಾರಿಗಳಿಂದ ಎರಡು ಅಂತಸ್ತು ಸೇರ್ಪಡೆಗೊಳಿಸಲು ಅನುಮತಿ ಪಡೆದುಕೊಂಡಿದೆ.
ಕಳೆದ ಕೆಲವು ದಿನಗಳಿಂದ ಸುರಿದ ಭಾರೀಮಳೆಗೆ ಕಂದಾಯಭವನ ಕಟ್ಟದ ಆವರಣ ಗೋಡೆ ಕುಸಿದು ಪಕ್ಕದ ಇನ್ನೊಂದು ಕಟ್ಟಡದ ಮೇಲೆ ಬಿದ್ದಿದೆ. ಇದಕ್ಕೆ ಮಳೆನೀರು ಹರಿದು ಹೋಗುವ ವ್ಯವಸ್ಥೆ ಸರಿ ಇಲ್ಲದಿರುವುದು ಮತ್ತು ಸುಮಾರು ಹತ್ತು ಅಡಿ ಎತ್ತರಕ್ಕೆ ಕೇವಲ ಧೂಳು ಮಣ್ಣಿನಿಂದ ತುಂಬಿಸಿ ಕಟ್ಟಡ ನಿರ್ಮಿಸಿರುವುದು ಕಾರಣ ಎನ್ನಲಾಗಿದೆ. ಅಲ್ಲದೆ ಕಟ್ಟಡ ನಿರ್ಮಾಣಕ್ಕೆ ಮಂಗಳೂರು ಮಹಾ ನಗರ ಪಾಲಿಕೆ ಹಾಗೂ ಮೂಡಾದಿಂದ ಯಾವುದೇ ಪರವಾನಿಗೆ ಪಡೆದಿರುವುದಿಲ್ಲ ಎಂದು ತಿಳಿದು ಬಂದಿದೆ.
ಕಂದಾಯಭವನದ ಹಿಂಬದಿಯ ಕಂದುಕ ದಲ್ಲಿ ಸುಮಾರು ಹತ್ತು ಅಡಿ ಆಳದಲ್ಲಿ ಹತ್ತಿಪ್ಪತ್ತು ಮನೆಗಳಿವೆ. ಎಲ್ಲಿಯಾದರೂ ಕಂದಾಯಭವನ ಕಟ್ಟಡ ಕುಸಿದು ಬಿದ್ದರೆ ಕೆಳಗಿರುವ ಮನೆಗಳ ಮೇಲೆ ಬಿದ್ದು ದೊಡ್ಡ ಅನಾಹುತ ಸಂಭವಿಸಲಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಿಸಿ ಸೂಕ್ತ ವ್ಯವಸ್ಥೆ ಮಾಡದೇ ಇದ್ದಲ್ಲಿ ಕಟ್ಟಡ ಹಾನಿಗೊಳಗಾಗುವುದು ಖಚಿತ ಎಂದು ಅಕ್ಕ ಪಕ್ಕದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಇದರ ಪಕ್ಕದಲ್ಲೇ ಇರುವ ಹ್ಯಾಮಿಲ್ಟನ್ ಕಟ್ಟಡವು ಬಿರುಕು ಬಿಟ್ಟಿದ್ದು ಮೇಲಿನ ಮೂರು ಅಂತಸ್ತುಗಳು ಕಂದುಕದ ಬದಿಗೆ ವಾಲಿದೆ. ಈ ಮೂರು ಅಂತಸ್ತುಗಳ ಗೋಡೆಗಳು ಪಿಲ್ಲರ್ ಗಳನ್ನು ನಾಲ್ಕು ಅಡಿ ಮೀರಿಸಿ ಕಟ್ಟಿರುವುದರಿಂದ ಗೋಡೆಯ ಭಾರವನ್ನು ತಾಳಲಾರದೆ ಚಾವಣಿಗಳು ಬಿರುಕು ಬಿಟ್ಟಿದೆ. ಈ ಕಟ್ಟವನ್ನು ತೆರವುಗೊಳಿಸದೆ ಇದ್ದಲ್ಲಿ ಕಟ್ಟಡದ ಒಳಗೆ ಇರುವವರಿಗೂ ಕಂದುಕದ ಮನೆಗಳಿಗೂ ಅಪಾಯ ತಪ್ಪಿದಲ್ಲ. ಇದೇ ಕಟ್ಟಡದಲ್ಲಿ ಪರವಾನಿಗೆ ಇಲ್ಲದೆ ಲೇಡಿಸ್ ಹಾಸ್ಟೆಲ್ ಸಹ ಇದೆ.
Click this button or press Ctrl+G to toggle between Kannada and English