ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಯಾವುದೇ ಸಮಸ್ಯೆ ಇಲ್ಲ: ಡಿ.ಸಿ‌.ತಮ್ಮಣ್ಣ

3:28 PM, Wednesday, July 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

d-c-tamannaಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಯಾವುದೇ ಸಮಸ್ಯೆ ಇಲ್ಲ. ಇನ್ನೊಂದು ವಾರದಲ್ಲಿ ಬಸ್ ಪಾಸ್ ಕುರಿತು ಅಧಿಕೃತ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಸಾರಿಗೆ ಸಚಿವ ಡಿ.ಸಿ‌.ತಮ್ಮಣ್ಣ ಹೇಳಿದ್ದು, ಜೊತೆಗೆ ಬಸ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಬಂದಿರುವ ಮಾಹಿತಿ ನೀಡಿ ಪ್ರಯಾಣ ದರ ಹೆಚ್ಚಳ ಸಾಧ್ಯತೆಯ ಸುಳಿವು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಬಸ್ ಪಾಸ್ಗೆ 2 ಸಾವಿರ ಕೋಟಿ ರೂ. ಖರ್ಚು ಬರಲಿದೆ. ಶಿಕ್ಷಣ ಮಂತ್ರಿಗಳು ಶಿಕ್ಷಣ ಇಲಾಖೆಯಿಂದ ಶೇ. 25ರಷ್ಟು ಅನುದಾನ ಕೊಡುತ್ತೇವೆ ಅಂದಿದ್ದಾರೆ. ಸಾರಿಗೆ ಇಲಾಖೆಯಿಂದ ಶೇ. 25 ರಷ್ಟು ಅನುದಾನ ಕೊಡುತ್ತೇವೆ. ಸರ್ಕಾರ ಶೇ. 50 ರಷ್ಟು ಅನುದಾನ ಕೊಡಲಿದೆ. ಹಿಂದೆಯೂ ಸರ್ಕಾರ ಇಷ್ಟೇ ನೆರವು ಕೊಡುತ್ತಿತ್ತು. ಮುಖ್ಯಮಂತ್ರಿಗಳು ಸದ್ಯ ದೆಹಲಿಯಲ್ಲಿದ್ದಾರೆ. ಮುಖ್ಯಮಂತ್ರಿಗಳು ದೆಹಲಿಯಿಂದ ಬಂದ ಬಳಿಕ ಬಸ್ ಪಾಸ್ ಕುರಿತು ಚರ್ಚೆ ನಡೆಸಿ ಒಂದು ವಾರದಲ್ಲಿ ಬಸ್ ಪಾಸ್ ಕುರಿತು ತೀರ್ಮಾನ ಪ್ರಕಟಿಸಲಾಗುತ್ತದೆ ಎಂದರು.

ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳದಿಂದ ಸಾರಿಗೆ ಇಲಾಖೆಯ ನಷ್ಟದ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇಲಾಖೆಗೆ ಕನಿಷ್ಠ 1000 ಕೋಟಿ ರೂ. ಹೆಚ್ಚುವರಿ ಅನುದಾನ ಕೇಳಿದ್ದೇವೆ‌. ಜತೆಗೆ ಶೇ. 20ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಎಲ್ಲ ಸಾರಿಗೆ ನಿಗಮಗಳೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ‌. ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ಸಾರಿಗೆ ಸೆಸ್ ಸಂಗ್ರಹಿಸುವಂತೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮಹಾನಗರ ಪಾಲಿಕೆಯಿಂದ ಈಗಾಗಲೇ ಭಿಕ್ಷುಕರ ಕರ ಸೇರಿದಂತೆ ವಿವಿಧ ಸೆಸ್ಗಳನ್ಮು ವಿಧಿಸಲಾಗುತ್ತಿದೆ. ಅದೇ ರೀತಿ ಸಾರಿಗೆ ಸೆಸ್ ಸಂಗ್ರಹಿಸಿ ಕೊಟ್ಟರೆ ನಗರ ಸಾರಿಗೆಗೆ ಅನುಕೂಲವಾಗುತ್ತದೆ ಎಂದರು.

ಇನ್ನು ಮನಸ್ಸಿಗೆ ದುಃಖ ಆದಾಗ ಅತ್ತು ಬಿಡಬೇಕು. ಆಗಲೇ ಮನಸ್ಸಿಗೆ ಸಮಾಧಾನವಾಗುತ್ತದೆ. ಸಿಎಂ ಭಾವನಾತ್ಮಕ ವ್ಯಕ್ತಿ. ಹಾಗಾಗಿ ಅವರು ಅಳುವಿನ ಮೂಲಕ ತಮ್ಮ ದುಃಖ ಶಮನ ಮಾಡಿಕೊಂಡಿದ್ದಾರೆ. ಸಿಎಂ ಯಾರ ಮೇಲೂ ಆರೋಪ ಮಾಡಿಲ್ಲ. ಯಾರೂ ತಮಗೆ ನೋವು ಕೊಟ್ಟಿದ್ದಾರೆ ಎಂದು ಹೇಳಿಲ್ಲ. ಅವರಿಗೆ ಯಾರಿಂದಲಾದರೂ ನೋವಾಗಿರಬಹುದು ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English