ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯದಲ್ಲೇ 100 ರೂ. ಮುಖಬೆಲೆಯ ಹೊಸ ನೋಟನ್ನು ಜಾರಿಗೆ ತರಲಿದೆ. ಈಗಿರುವ 100 ರೂ. ನೋಟಿಗಿಂತಲೂ ಚಿಕ್ಕದ್ದಾಗಿ, 10 ರೂ. ನೋಟಿಗಿಂತ ಕೊಂಚ ದೊಡ್ಡದಾಗಿರುವ ನೋಟನ್ನು ಆರ್ಬಿಐ ಪರಿಚಯಿಸಿದೆ.
ಹೊಸ ನೋಟನ್ನು ಜಾರಿಗೆ ತರುತ್ತಿರುವ ಆರ್ಬಿಐ ಹಳೆಯ ನೂರರ ನೋಟನ್ನು ಹಿಂಪಡೆಯುವ ಯೋಚನೆ ಇಲ್ಲ ಎಂದು ತಿಳಿಸಿದೆ. ಈಗಾಗಲೇ ಹೊಸ ನೋಟಿನ ವಿನ್ಯಾಸ ಅಂತಿಮವಾಗಿದ್ದು, ಮುದ್ರಣ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ. ಮುಂದಿನ ತಿಂಗಳು ಇಲ್ಲವೇ ಸೆಪ್ಟೆಂಬರ್ ನಲ್ಲಿ ಹೊಸ ನೋಟು ಜನಸಾಮಾನ್ಯರ ಕೈ ಸೇರಲಿದೆ ಎನ್ನಲಾಗುತ್ತಿದೆ.
ಹೊಸ ನೂರರ ನೋಟಿನಲ್ಲಿ ಹಲವು ಸೂಕ್ಷ್ಮ ಭದ್ರತಾ ವೈಶಿಷ್ಟ್ಯಗಳು ಇರಲಿವೆ. ಗುಜರಾತ್ ನ ಐತಿಹಾಸಿಕ ಮೆಟ್ಟಿಲುಗಳಿರುವ ರಾಣಿ ಕಿ ವಾವ್ ನ ಚಿತ್ರ ನೋಟಿನ ಮೇಲೆ ಇದೆ. ಹೊಸ ನೋಟುಗಳು ಅಳತೆಗೆ ತಕ್ಕಂತೆ ಎಟಿಎಂಗಳನ್ನು ಸೆಟ್ ಮಾಡುವ ಜವಾಬ್ದಾರಿ ಬ್ಯಾಂಕ್ಗಳಿಗೆ ತಲೆನೋವಾಗಲಿದೆ ಎನ್ನಲಾಗುತ್ತಿದೆ. 500, 1000 ಮುಖಬೆಲೆ ನೋಟುಗಳ ಅಮಾನ್ಯೀಕರಣ ಹಾಗೂ ಹೊಸ 2000, 500, 200 ಮುಖಬೆಲೆಯ ನೋಟು ಜಾರಿಗೆ ಬಂದಾಗಲೂ 100 ರೂ. ನೋಟು ಜಾಲ್ತಿಯಲ್ಲಿತ್ತು. ಈಗ ಹಳೆಯದರ ಜೊತೆಗೆ ಹೊಸ100 ರೂ. ನೋಟು ಜಾರಿಗೆ ಬರಲಿದೆ.
Click this button or press Ctrl+G to toggle between Kannada and English