ದೇಶದಾದ್ಯಂತ ಲಾರಿ ಮುಷ್ಕರ..ಕರ್ನಾಟಕ ಸರಕು ಸಾಗಣೆದಾರರ ಸಂಘದಿಂದ ಪ್ರತಿಭಟನೆ!

6:27 PM, Friday, July 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

lori-protestಬೆಂಗಳೂರು: ದೇಶದಾದ್ಯಂತ ಲಾರಿ ಮುಷ್ಕರ ಹಿನ್ನಲೆ ನಗರದ ಟೌನ್ ಹಾಲ್ ಮುಂದೆ ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಹಾಗೂ ಕರ್ನಾಟಕ ಸರಕು ಸಾಗಣೆದಾರರ ಸಂಘದಿಂದ ಪ್ರತಿಭಟನೆ ನಡೆಯಿತು.

ಟೋಲ್ ಮುಕ್ತ ಭಾರತಕ್ಕೆ ಒತ್ತಾಯಿಸಿ ಹಾಗೂ ಇಂಧನ ದರ ಕಡಿಮೆ ಮಾಡಬೇಕು ಹಾಗೂ ಥರ್ಡ್ ಪಾರ್ಟಿ ಇನ್ಸೂರೆನ್ಸ್ ದರ ಕಡಿಮೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು‌.

ದೇಶಾದ್ಯಂತ ವಾಣಿಜ್ಯ ವಾಹನಗಳ ಸ್ಥಗಿತ ಮಾಡಲಾಗುವುದು, ದೇಶದಲ್ಲಿ 412 ಟೋಲ್ ಗೇಟ್ ಹಾಗೂ ರಾಜ್ಯದಲ್ಲಿ 29 ಟೋಲ್ ಗೇಟ್ ಗಳಿವೆ. ಇವುಗಳಿಂದ ವಾರ್ಷಿಕ 16,700 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಇದನ್ನು ಮುಂಗಡವಾಗಿ ಪಾವತಿಸಲು ನಾವು ಸಿದ್ಧರಿದ್ದೇವೆ. ಇಂಧನ ಧನವನ್ನೂ ಒಂದೇ ಬಾರಿಗೆ ಸೆಸ್ ಮೂಲಕ ಕಲೆಕ್ಟ್ ಮಾಡಿಕೊಳ್ಳಲಿ. ಆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡುವ 40 ಲಕ್ಷ ವಾಹನಗಳಿಗೆ ಪದೇ ಪದೇ ಟೋಲ್ ಕಲೆಕ್ಟ್ ಮಾಡುವ ಕಿರಿಕಿರಿ ಬೇಡ. ಅಲ್ಲದೆ 300 ಟೋಲ್ ಗೇಟ್ ಗಳಲ್ಲಿ ಕಲೆಕ್ಷನ್ ಮುಗಿದಿದ್ರೂ ಇನ್ನೂ ಟೋಲ್ ಸಂಗ್ರಹ ನಿಲ್ಲಿಸಲಾಗಿಲ್ಲ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಇದೇ ವೇಳೆ ಜಲ್ಲಿ ತಯಾರಿಕಾ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.‌ ರಾಜ್ಯ ಸರ್ಕಾರದಿಂದ ಅನ್ಯಾಯವಾಗುತ್ತಿದ್ದು ಮರಳು ಮಾಫಿಯಾ ಮಿತಿ ಮೀರಿದೆ. ಇದರಿಂದ ಜಲ್ಲಿ ಉತ್ಪಾದನೆ ಸಂಪೂರ್ಣವಾಗಿ ನಿಂತು ಹೋಗಿದೆ ಎಂದರು.

ಈ ವೇಳೆ ನಗರದಲ್ಲಿ ಲಾರಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ‌. ಇಂದು ರಾಜ್ಯವ್ಯಾಪಿ ಮುಷ್ಕರ ಕರೆ ನೀಡಿದ್ದರೂ ಲಾರಿ ಹಾಗು ಟ್ರಕ್ ರಸ್ತೆಗಿಳಿದಿದ್ದವು‌. ಸಂಘದಲ್ಲಿ ಉಂಟಾದ ಒಡಕಿನ ಕಾರಣ ಪ್ರತಿಭಟನೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗಿಯಾಗಿದ್ದು, ಟ್ರಕ್ ಮಾಲೀಕರು ಮತ್ತು ಸಣ್ಣ ಗೂಡ್ಸ್ ಓನರ್ಸ್ ಬೆಂಬಲ ಸೂಚಿಸದೇ ಇರುವುದು ಕಂಡುಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English