ಮಂಗಳೂರು: ಮಂಗಳೂರಿನ ಅಪಾರ್ಟ್ಮೆಂಟ್ಗಳ ಸೆಕ್ಯುರಿಟಿಯವರ ಸ್ಮಾರ್ಟ್ಫೋನ್ ಮತ್ತು ಐಶಾರಾಮಿ ಕಾರಿನ ಲೋಗೋ ಕದಿಯುತ್ತಿದ್ದ ಇಬ್ಬರು ಮತ್ತು ಕದ್ದ ಮೊಬೈಲನ್ನು ಖರೀದಿಸಿದ ಮೂವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಪಚ್ಚನಾಡಿ ಪದವಿನಂಗಡಿಯ ವಿಶಾಲ್ ನಾಯಕ್ (18), ಅಭಿಷೇಕ್ ಪೂಜಾರಿ (18) ಸ್ಮಾರ್ಟ್ಫೋನ್ ಮತ್ತು ಕಾರಿನ ಲೋಗೋ ಕದಿಯುತ್ತಿದ್ದ ಆರೋಪಿಗಳು. ಆರೋಪಿಗಳಿಂದ ಕದ್ದ ಮೊಬೈಲನ್ನು ಖರೀದಿಸುತ್ತಿದ್ದ ತಲಪಾಡಿಯ ಅಬ್ದುಲ್ ಸಿನಾನ್ (25), ಬಜಾಲ್ ಪಡ್ಪುವಿನ ಮುಹಮ್ಮದ್ ಸವಾದ್ (26)ಸುರತ್ಕಲ್ನ ಸದಕ್ ತುಲ್ಲಾ (30) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಶಾಲ್ ಮತ್ತು ಅಭಿಷೇಕ್ ಬೈಕ್ನಲ್ಲಿ ಮಂಗಳೂರು ನಗರದ ಸುತ್ತಮುತ್ತ ಸಂಚರಿಸಿ ವಿವಿಧ ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಗಾರ್ಡ್ಗಳ ಮೊಬೈಲ್ಗಳನ್ನು ಕಳ್ಳತನ ಮಾಡುವುದಲ್ಲದೆ, ಐಷರಾಮಿ ಕಾರುಗಳಾದ ಬಿಎಂಡಬ್ಲ್ಯು, ಜಾಗ್ವರ್, ಆಡಿ ಇದರ ಲೋಗೋವನ್ನು ಕಳವುಗೈಯುತ್ತಿದ್ದರು. ಬಂಧಿತರಿಂದ 6 ಸ್ಮಾರ್ಟ್ ಫೋನ್ ಮೊಬೈಲ್ , ಕಾರಿನ 11 ಲೋಗೋ ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
Click this button or press Ctrl+G to toggle between Kannada and English