ಮಂಗಳೂರು:ನಗರದ ಕಂಕನಾಡಿ ಕರಾವಳಿ ವೃತ್ತದಿಂದ ಪಂಪುವೆಲ್ ರಸ್ತೆಯವರೆಗೆ ಸ್ವಚ್ಛತಾ ಅಭಿಯಾನವನ್ನು ಯೂಥ್ ಬಂಟ್ಸ್ ನೇತೃತ್ವದಲ್ಲಿ ನಡೆಯಿತು.ಯೂಥ್ ಬಂಟ್ಸ್ ದಕ್ಷಿಣ ಕನ್ನಡ ಆಯೋಜಿಸಿದ್ದ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಕಂಕನಾಡಿ ಕರಾವಳಿ ವೃತ್ತದಿಂದ ಪಂಪವೆಲ್ ರಸ್ತೆಯವರೆಗಿನ ರಸ್ತೆಯ ಗುಂಡಿಗಳನ್ನು ಮುಚ್ಚಿ ,ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ,ಜಯಂಬಿಕಾ ಚೀಟ್ಸ್ ನ ನಿರ್ದೇಶಕರಾದ ಶ್ರೀ ಸುರೇಶ ರೈ, ಜಪ್ಪು ಬಂಟರ ಸಂಘದ ಅಧ್ಯಕ್ಷ ಶ್ರೀ ಸುನಿಲ್ ಶೆಟ್ಟಿ, ಖ್ಯಾತ ನಿರ್ದೇಶಕ ಶ್ರೀ ಸುಕೇಶ್ ಭಂಡಾರಿ,ರಾಜೇಶ್ ಶೆಟ್ಟಿ, ರೋಷನ್ ಶೆಟ್ಟಿ, ಸೂರಜ್ ಶೆಟ್ಟಿ ಮುಂತಾದವರು ಚಾಲನೆ ನೀಡಿದರು. ಯೂಥ್ ಬಂಟ್ಸ್ ಮಂಗಳೂರಿನ ಅಧ್ಯಕ್ಷ, ಜಯಂಬಿಕಾ ಚೀಟ್ಸ್ ನ ನಿರ್ದೇಶಕ, ಎ. ಕೃಷ್ಣ ಶೆಟ್ಟಿ ತಾರೆಮಾರ್ ಸ್ವಾಗತಿಸಿದರು .ಕಾರ್ಯಕ್ರಮದಲ್ಲಿ ಬಜ್ಪೆಯ ಭರತ್ ತನ್ನ ಅಂಗ ಊನತೆಯನ್ನು ಮರೆತು ಸಂಪೂರ್ಣವಾಗಿ ಭಾಗವಹಿಸಿ ಇತರ ಯುವಕರಿಗೂ ಮಾದರಿಯಾದರು.
ಸರಳ ಸಮಾರೋಪ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ಶ್ರೀ ವಿಜಯ ಕುಮಾರ್ ಕೊಡಿಯೇಲ್ ಬೈಲ್ ,ಮ.ನ.ಪಾ.ಸದಸ್ಯ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು,ಕಾವೂರು ಬಂಟರ ಸಂಘದ ಅಧ್ಯಕ್ಷ ಶ್ರೀ ಆನಂದ ಶೆಟ್ಟಿ ಅಡ್ಯಾರ್ ,ಬಂಟ್ವಾಳ್ ಯೂಥ್ ಬಂಟ್ಸ್ ಅಧ್ಯಕ್ಷರಾದ ಶ್ರೀ ನಿಶಾನ್ ಆಳ್ವ,ಖ್ಯಾತ ನಿರೂಪಕ ನಿತೇಶ್ ಎಕ್ಕಾರ್ ,ನರೇಂದ್ರ ರೈ,ರಾಜೇಶ್ ಶೆಟ್ಟಿ,ಕರುಣ್ ಶೆಟ್ಟಿ,ಮತ್ತು ಯೂಥ್ ಬಂಟ್ಸ್ ನ ಸದಸ್ಯರು ಭಾಗವಹಿಸಿದರು. ಮ.ನ.ಪಾ.ಸದಸ್ಯ ಪ್ರೇಮಾನಂದ ಶೆಟ್ಟಿ ಹಾಗು ಮ.ನ.ಪಾ ಸಿಬ್ಬಂದಿ ಪ್ರವೀಣ್ ಮತ್ತು ಸಂಗಡಿಗರು ಸಹಕರಿಸಿದರು.ಅಮೃತ ಸಂಜೀವಿನಿ ಬಳಗದ ಕೆ ಆರ್.ಶೆಟ್ಟಿ ವಂದನಾರ್ಪಣೆ ಗೈದರು
Click this button or press Ctrl+G to toggle between Kannada and English