ಮಂಗಳೂರು: ಕುಡುಪು ವಿವಿಧೊದ್ದೇಶ ಸಹಕಾರಿ ಸಂಘ (ನಿ)ದ ವಾರ್ಷಿಕ ಮಹಾಸಭೆ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಶ್ರೀ ಸುಬ್ರಹ್ಮಣ್ಯ ಮಂದಿರದಲ್ಲಿ ಸಂಘದ ಅಧ್ಯಖ್ಷರಾದ ಶ್ರೀ ಜನಾರ್ಧನ ಬಿ. ಇವರ ಅಧ್ಯಕ್ಷತೆ ಯಲ್ಲಿ ಜರಗಿತು. 2017-18ರ ಸಾಲಿನಲ್ಲಿ 60.58 ಲಕ್ಷರೂ. ಪಾಲು ಬಂಡವಾಳ ಹೊಂದಿದ್ದು 16.95 ಕೋಟಿ ರೂ ಠೇವಣಿ ಇದ್ದು 11.33ಕೋಟಿರೂ ಸಾಲ ನೀಡಿರುತ್ತದೆ.
2017-18ನೇ ಸಾಲಿನಲ್ಲಿ 53.06 ಲಕ್ಷರೂ ಲಾಭಗಳಿಸಿರುತ್ತದೆ ಎಂದುಅಧ್ಯಕ್ಷರು ಸಭೆಗೆ ವಿವರಿಸಿದರು. 2017-18ನೇ ಸಾಲಿನ ಸಂಘದ ಸದಸ್ಯರಿಗೆ ಶೇ 20 ರಡಿವಿಡೆಂಟ್ ಘೋಷಿಸಲಾಯಿತು.
ಸಂಘದ ಸ್ಥಾಪಕ ಸದಸ್ಯರಾದ ಪೂಜ್ಯ ಶ್ರೀ ಕೆ. ನರಸಿಂಹ ತಂತ್ರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಪುರಸ್ಕರಿಸಿದರು. ಸಂಘದಉಪಾಧ್ಯಕ್ಷರಾದ ನಾಗರಾಜ ಭಟ್ ನಿರ್ದೇಶಕರಾದರಾಘವೇಂದ್ರ ಭಟ್, ರತ್ನಾಕರ ಬಾಯಾರ್, ಕೆ.ಕುಮಾರ, ಪ್ರಶಾಂತರಾವ್, ಕೆ. ಚಂದ್ರಹಾಸ, ಉಮೇಶ ಬಂಗೇರ, ಮುಕೇಶ್‌ಕುಮಾರ್ ಶ್ರೀಮತಿ ಕವಿತಾ, ಶ್ರೀಮತಿ ವೀಣಾಶಾಂತಪ್ಪ ಮುಖ್ಯಕಾರ್ಯನಿರ್ವಹಣಾಧಿಕಾರಿಜತ್ತಪ್ಪ ಆಳ್ವ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English