ನೂತನ ಐಜಿಪಿ ಪ್ರತಾಪ ರೆಡ್ಡಿ ಅಧಿಕಾರ ಸ್ವೀಕಾರ

4:37 PM, Thursday, December 15th, 2011
Share
1 Star2 Stars3 Stars4 Stars5 Stars
(4 rating, 1 votes)
Loading...

Igp Pratap Reddy

ಮಂಗಳೂರು: ಪಶ್ಚಿಮ ವಲಯವು ಪೊಲೀಸ್‌ ಇಲಾಖೆಯ ನೂತನ ಐಜಿಪಿಯಾಗಿ ಪ್ರತಾಪ ರೆಡ್ಡಿ ಅವರು ಬುಧವಾರ ಇಲ್ಲಿನ ಐಜಿಪಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಉನ್ನತ ತರಬೇತಿಗಾಗಿ ವಿದೇಶಕ್ಕೆ ತೆರಳಲಿರುವ ಐಜಿಪಿ ಅಲೋಕ್‌ ಮೋಹನ್‌ ಅವರಿಂದ ತೆರವಾಗುವ ಸ್ಥಾನಕ್ಕೆ ಪ್ರತಾಪ ರೆಡ್ಡಿಯವರನ್ನು ನಿಯೋಜಿಸಲಾಗಿದೆ.

ಅಧಿಕಾರ ವಹಿಸಿಕೊಂಡ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ರೆಡ್ಡಿ ಕೇವಲ ಅಪರಾಧ ಪ್ರಕರಣಗಳ ಪತ್ತೆ ಪೊಲೀಸ್‌ ಇಲಾಖೆಯ ಸಾಧನೆಯ ಮಾನದಂಡವಲ್ಲ, ಇಲಾಖೆಯ ಸಮಗ್ರ ಚಟುವಟಿಕೆಗಳನ್ನು ಪರಿಗಣಿಸಿ ಸಾಧನೆಯನ್ನು ಅಳೆಯ ಬೇಕು ಎಂದು ಅಧಿಕಾರ ಸ್ವೀಕಾರದ ಬಳಿಕ ಐಜಿಪಿ ಪ್ರತಾಪ ರೆಡ್ಡಿ ಅವರು ತಿಳಿಸಿದರು.

ಜನರು ಭಯ ಮುಕ್ತವಾಗಿ, ನಿರ್ಭಯವಾಗಿ ಮತ್ತು ಪಾರದರ್ಶಕವಾಗಿ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸುವಂತಾಗಿ, ಪೊಲೀಸ್‌ ವ್ಯವಸ್ಥೆಯ ಮೇಲೆ ಜನರಿಗೆ ಇರುವ ವಿಶ್ವಾಸವನ್ನು ಮತ್ತಷ್ಟು ಬಲ ಪಡಿಸಲು ಪ್ರಯತ್ನಿಸುವುದಾಗಿ ಪಶ್ಚಿಮ ವಲಯದ ನೂತನ ಐಜಿಪಿ ಪ್ರತಾಪ ರೆಡ್ಡಿ ಅವರು ತಿಳಿಸಿದ್ದಾರೆ.

ಪಶ್ಚಿಮ ವಲಯವು ಪೊಲೀಸ್‌ ಇಲಾಖೆಯ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಮಹತ್ವದ್ದಾಗಿದೆ. ಕೋಮು ಉದ್ರಿಕ್ತತೆ, ಸಂಘಟಿತ ಅಪರಾಧ, ನಕ್ಸಲಿಸಂ, ಉಗ್ರಗಾಮಿ ಚಟುವಟಿಕೆ ಸಹಿತ ವಿವಿಧ ಸವಾಲುಗಳು ಇಲ್ಲಿವೆ. ಪ್ರಸ್ತುತ ಉತ್ತಮ ಪರಿಸ್ಥಿತಿ ಇದ್ದು, ಪೊಲೀಸ್‌ ಅಧಿಕಾರಿಗಳ ಜತೆ ಚರ್ಚಿಸಿ ಯಥಾ ಸ್ಥಿತಿಯನ್ನು ಕಾಯ್ದುಕೊಂಡು ಬರಲು ಪ್ರಯತ್ನಿಸಲಾಗುವುದು. ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಮಂಗಳೂರಿನ ಪೊಲೀಸ್‌ ಅಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಾಬುರಾಮ್‌, ಅಡೀಶನಲ್‌ ಎಸ್‌ಪಿ ಪ್ರಭಾಕರ್‌, ಡಿಸಿಪಿ ಡಿ. ಧರ್ಮಯ್ಯ, ಐಜಿಪಿ ಕಚೇರಿಯ ಡಿವೈಎಸ್‌ಪಿ ಹರಿಶ್ಚಂದ್ರ ಮುಂತಾದವರು ಉಪಸ್ಥಿತರಿದ್ದರು.

.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English