ಮಂಗಳೂರು : ಬೆಚ್ಚನೆಯ ಹೊದಿಕೆ ಹಾಕಿ, ಹಾಲು ಬ್ರೆಡ್ಡು ತಿಂದು ಹಾಯಾಗಿ ಮಲಗುವ ಮಕ್ಕಳು ಇಂದು ಭಿಕ್ಷಾಟನೆಗೆ ಇಳಿದಿದ್ದಾರೆ. ಪೌಷ್ಟಿಕಾಂಶವಿಲ್ಲದೆ, ಆಹಾರ ವಿಲ್ಲದೆ, ತಮ್ಮ ಭವಿಷ್ಯವನ್ನೇ ನಷ್ಟಮಾಡಿಕೊಳ್ಳುತ್ತಿದ್ದಾರೆ.
ಶ್ರೀಮಂತರ ಮಕ್ಕಳೇನೋ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿ ಶಾಲೆಗೆ ಹೋಗುತ್ತಾರೆ. ಅವರು ಕೆಮ್ಮಿದರೆ ಜೌಷಧಿಕೊಡಲು ಪಾಲಕರು ಜೊತೆಯಲ್ಲಿಯೇ ಇರುತ್ತಾರೆ. ಅದರೆ ಭಿಕ್ಷುಕ ಮಕ್ಕಳಿಗೆ?
ಹಸಿವಿಗಾಗಿ ಆ ಪುಟ್ಟ ಮಕ್ಕಳು ಗೋಗರೆಯುವುದನ್ನು ನೀವು ನೋಡಿದರೆ ನಿಮ್ಮ ಮನ ಕರಗದೆ ಇರಲಾರದು. ಗಾಳಿ ಮಳೆಗೆ ಬೆಚ್ಚಗೆ ಮಲಗಬೇಕಾದ ಆ ಪುಟಾಣಿಗಳು ನಡುಗುತ್ತಾ ಕೈಕಾಲು ಅದುಮಿಕೊಂಡು ಅಂಗಡಿ ಬಾಗಿಲೋ, ಬಸ್ ಸ್ಟ್ಯಾಂಡಿನ ಬಳಿಯೋ ನಿದ್ದೆ ಇಲ್ಲದೆ ನಿಂತಿರುತ್ತಾರೆ. ಇದು ನೀವು ನಗರದಲ್ಲಿ ಒಂದು ಸುತ್ತು ಹಾಕಿ ಮನವರಿಕೆ ಮಾಡಬೇಕಾದ ವಿಷಯ.
ಮಕ್ಕಳಲ್ಲಿ ಭಿಕ್ಷಾಟನೆ ಮಾಡಿಸುವರಿಗೆ ಮಂಗಳೂರು ಸ್ವರ್ಗ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿ ಜಯಮಾಲ, ರಾಜ್ಯ ಮಕ್ಕಳ ಅಯೋಗ ಅಧ್ಯಕ್ಷೆ ಕೃಪ ಅಮರ್ ಅಳ್ವ, ರಾಜ್ಯ ಭಿಕ್ಷುಕರ ಸಚಿವ ಕರ್ತವ್ಯ ನಿರ್ವಹಿಸುವಲ್ಲಿ ಮೌನ ತಾಳಿರುವುದರ ಹಿಂದೆ ಅವರ ಅಸಹಾಯಕತೆ ಎದ್ದು ಕಾಣುತ್ತದೆ.
ವಯಸ್ಸಿನ ಮದಕ್ಕೋ, ಕಾಮ ತೀಟೆ ತೀರಿಕೊಳ್ಳುವುದಕ್ಕಾಗಿಯೋ ಹುಟ್ಟಿದ ಮಕ್ಕಳ ಭವಿಷ್ಯ ನಾವು ಊಹಿಸಲೂ ಅಸಾಧ್ಯ. ಪಾಪ ಇದ್ಯಾವುದನ್ನು ಅರಿಯದ ಮಕ್ಕಳ ಆ ಪಾಡು ಬುದ್ದಿ ಜೀವಿಗಳ ಮನ ಕಲಕುವಂತದ್ದು.
ಇನ್ನೊಂದು ಮನ ಮಿಡಿಯುವ ಸಂಗತಿ ಎಂದರೆ ಭಿಕ್ಷೆ ಬೇಡುವುದಕ್ಕಾಗಿಯೇ ಮುಗ್ದ ಮಕ್ಕಳನ್ನು ಅಂಗ ಹೀನರನ್ನಾಗಿ ಮಾಡಿ ಕಣ್ಣೋ, ಕೈಯೋ ಕತ್ತರಿಸಿ ಬಿಡುತ್ತಾರೆ. ಹೀಗೆ ಮಾಡಿ ಭಿಕ್ಷೆ ಬೇಡಿಸಿದರೆ ಜನರು ಜಾಸ್ತಿ ದುಡ್ಡು ಹಾಕುತ್ತಾರೆ ಎನ್ನುವ ಭಾವ ಆ ಮಕ್ಕಳ ಪಾಲಕರದ್ದು.
ನಗರದಲ್ಲಿ ಮಕ್ಕಳ ಭಿಕ್ಷಾಟನೆ ಹಾವಳಿ ತೀವ್ರಗೊಂಡಿದ್ದು, ಅವರ ಪೋಷಕರಿಗೆ ಮಂಗಳೂರು ಸ್ವರ್ಗ ವಾಗಿದೆ. ಯಾಕಂದರೆ ಮಂಗಳೂರಿಗರು ದಯಾಮಯಿಗಳು. ಕೈ ಎತ್ತಿ ದಾನ ಮಾಡುತ್ತಾರೆ. ಆದರೆ ನೀವು ಕೊಡುವ ಆ ಭಿಕ್ಷೆಯಿಂದ ಮಕ್ಕಳ ಭವಿಷ್ಯ ಹಸನಾಗುವುದೇ.
ಭಿಕ್ಷಾಟನೆಯಲ್ಲಿ ತೊಡಗಿರುವ 5ರಿಂದ 14 ವರ್ಷದ ಮಕ್ಕಳು ಹೆಚ್ಚಾಗಿ ದೂರದ ಊರುಗಳಿಂದ ವಲಸೆ ಬಂದವರು. ಅವರನ್ನು ಭಿಕ್ಷೆಗೆ ಕಳುಹಿಸಿದ ಪೋಷಕರೂ ಅವರ ಜತೆಗೆ ಇರುತ್ತಾರೆ.
ಹೀಗಾಗಿ ಅವರನ್ನು ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವುದು ಸರಕಾರ ಮತ್ತು ಜಿಲ್ಲಾಡಳಿತ ಕಣ್ಣಿಲ್ಲದ ಕುರುಡಾಗಿದೆ ..ಇದಕ್ಕೆ ಜನರೇ ಚಿಕಿತ್ಸೆ ಮಾಡಬೇಕಾಗಿದೆ.
ಬಿಜೈ ಕಾಪಿಕಾಡ್‌ನಲ್ಲಿರುವ ವಸತಿ ಶಾಲೆಗೆ ಇವರನ್ನು ಕಳುಹಿಸುವುದಕ್ಕೆ ಅವಕಾಶ ಇದ್ದರೂ ಅದಕ್ಕೂ ಕಳಿಸುವ ಮಕ್ಕಳ ಅಯೋಗ ಅಧ್ಯಕ್ಷರು ಈ ಮಳೆಗಾಲದಲ್ಲೂ ಎ.ಸಿ ರೂಮ್ ಬಿಟ್ಟು ಹೊರ ಬರುತ್ತಿಲ್ಲ.
ಹೀಗಾಗಿ ಸೂಕ್ತ ಪರಿಹಾರ ಕಾಣದೆ ಸಮಸ್ಯೆ ಕಗ್ಗಂಟಾಗಿಯೇ ಇದೆ.ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಕ್ಕಳ ಭಿಕ್ಷಾಟನೆ ವಿಚಾರದಲ್ಲಿ ಇಲಾಖೆಯು ಅಸಡ್ಡೆ ತೋರಿಸಿ ಸರಕಾರಕ್ಕೆ ತಪ್ಪು ಲೆಕ್ಕಾಚಾರ ಹೇಗೆ ಕಳುಹಿಸಬೇಕೆಂದು ಆಲೋಚನೆಯಲ್ಲಿ ತೊಡಗಿದೆ.
ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಪ್ರತಿಯೊಂದು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕಾದ ಅಧಿಕಾರಿಗಳು ನಗರದಲ್ಲಿ ಶಾಲೆಗೆ ಹೋಗದ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ ಎಂದು ಹೇಳುತ್ತಿದ್ದರೂ, ಭಿಕ್ಷೆ ಎತ್ತುವ ಮಕ್ಕಳಿಗೆ ಮಾತ್ರ ಕೊರತೆ ಇಲ್ಲ. ದೂರದ ಬಿಹಾರ, ರಾಜಸ್ತಾನದಂತಹ ರಾಜ್ಯಗಳಿಂದ ಬಂದ ಅಲೆಮಾರಿ ಜನಾಂಗದವರ ಮಕ್ಕಳು ನಗರದ ಲಾಲ್‌ಬಾಗ್ ಸಹಿತ ಹಲವೆಡೆ ಕಾಣಿಸುತ್ತಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸರಕಾರದ ಅದ್ಯ ಕರ್ತವ್ಯ ಅಗಿದ್ದರೂ ಯಾವೊಬ್ಬ ಅಧಿಕಾರಿ ಚಾಕಾರ ಎತ್ತುತ್ತಿಲ್ಲ.
ಭಿಕ್ಷುಕರ ಸ್ವರ್ಗ ಮಂಗಳೂರು
ಸಮಾಜ ಕಲ್ಯಾಣ ಇಲಾಖೆಯ ಮೇಲ್ವಿಚಾರಣೆಯಲ್ಲಿ ಪಚ್ಚನಾಡಿಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಭಿಕ್ಷುಕರ ಪುನರ್ವಸತಿ ಕೇಂದ್ರ ಎಷ್ಟು ಅಚ್ಚುಕಟ್ಟು, ಶುಚಿ, ಶುಭ್ರವಾಗಿದೆ ಎಂದು ಅಧಿಕಾರಿಗಳೂ ಹೇಳುತ್ತಿದ್ದರೂ, ಗೊತ್ತು ಗುರಿ ಇಲ್ಲದ ಭಿಕ್ಷುಕರಿಗೆ ಇದೊಂದು `ಸ್ವರ್ಗ~ದಂತೆ ಕಂಡರೆ ಅಚ್ಚರಿ ಇಲ್ಲ. . ಭಿಕ್ಷಾಟನೆ ನಿರ್ಮೂಲನೆ ಕಾಯ್ದೆಯಂತೆ ಪ್ರತಿಯೊಂದು ಜಿಲ್ಲೆಯಲ್ಲೂ ಇಂತಹ ಕೇಂದ್ರ ಇರಬೇಕು ಸರಕಾರದ ನಿಯಮವಾಗಿದೆ..
ಅದರಂತೆ ಭಿಕ್ಷುಕರಿಗೆ ಅವಕಾಶ ಕಲ್ಪಿಸಿ ಒಂದು ಊಟಕ್ಕೆ 56 ಹಣವನ್ನು ಮೇಲ್ವಿಚಾರಣೆ ಅಧಿಕಾರಿಗಳ ಅಕೌಂಟಿಗೆ ಜಮಮಾಡುತ್ತದೆ.
ಮಂಗಳೂರುನ ಭಿಕ್ಷುಕರ ಪುನರ್ವಸತಿ ಕೇಂದ್ರವಿದೆ.ಅಲ್ಲಿ ಯಾಕೆ ಅವರಿಗೆ ಪುನರ್ವಸತಿ ನೀಡುದಿಲ್ಲ ? ಈ ಬಗ್ಗೆ ಸ್ಥಳಿಯ ಶಾಸಕರು ಯಾಕೆ ಚಕಾರ ಶಬ್ದ ಎತ್ತುತ್ತಿಲ್ಲ ?
ಭಿಕ್ಷುಕರ ಪುನರ್ವಸತಿ ಕೇಂದ್ರದ ಅಧೀಕ್ಷಕಿ, ವಾರ್ಡನ್ , ಇಬ್ಬರು ಪುರುಷ, ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಹಾಗೂ ವಾಹನ ಚಾಲಕ ಇರುವ ಈ ಕೇಂದ್ರದಲ್ಲಿ ಸರ್ಕಾರದ ನಿಯಮದಂತೆ ಗರಿಷ್ಠ 3 ವರ್ಷ ಇರಬಹುದಾಗಿದ್ದು, ಗತಿ ಗೋತ್ರ ಇಲ್ಲದೆ ನಾಲ್ಕಾರು ವರ್ಷ ಇಲ್ಲೇ ಇರುವವರೂ ಇದ್ದಾರೆ. ಕಾರಣ ಗೊತ್ತಿಲ್ಲ.
ಇಲ್ಲಿಂದ ಹೊರಗೆ ಹೋದವರು ಮತ್ತೆ ಭಿಕ್ಷೆ ಎತ್ತಬಾರದು ಎಂಬುದೇ ನಮ್ಮ ಆಶಯ. ಆದರೆ ಪುಟ್ಟ ಕಂದಮ್ಮಗಳನ್ನು ಕಟ್ಟಿಕೊಂಡ ಮಹಿಳೆಯರನ್ನು ಹಿಡಿದು ಇಲ್ಲಿಗೆ ತಂದಾಗ ಮಕ್ಕಳಿಗೆ ಎದೆಹಾಲು ಕೊಡದೆ, ಔಷಧ ಕುಡಿಸದೆ ಸತಾಯಿಸುವ ಮಹಿಳೆಯರೂ ಇದ್ದಾರೆ. ಅವರು ಕುಡಿದು ಇಡೀ ಮಂಗಳೂರಿನ ಮಾನ ಮರ್ಯದೆ ತೆಗೆಯುತ್ತಿದ್ದಾರೆ.
ಈ ಎಲ್ಲಾ ಪ್ರಶ್ನೆ ಗಳಿಗೆ ನಾವು ಮತ ನೀಡಿದ ಜನಪ್ರತಿನಿಧಿಗಳು ಮತ್ತು ನಮ್ಮ ತೆರಿಗೆ ರೂಪದಲ್ಲಿ ಸಂಬಳ ನೀಡುವ ಅಧಿಕಾರಿಗಳು ಸೂಕ್ತ ಉತ್ತರ ನೀಡುವ ಎಂಬ ನಿರೀಕ್ಷೆಯಲ್ಲಿ ನಗರದ ಪ್ರಬುದ್ದ ಜನತೆ ಇದೆ.
Click this button or press Ctrl+G to toggle between Kannada and English