ಓಟ್ ಹಾಕುವಾಗ ಕುಮಾರಸ್ವಾಮಿ ಯಾಕೆ ನೆನಪಿಗೆ ಬರಲಿಲ್ಲ: ಎಚ್‌ಡಿ ಕುಮಾರಸ್ವಾಮಿ

11:55 AM, Tuesday, July 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

kumarswamykumarswamyರಾಮನಗರ: ಸಂಪೂರ್ಣ ಸಾಲಮನ್ನಾ ವಿಚಾರವಾಗಿ ಪ್ರತ್ಯೇಕ ರಾಜ್ಯಕ್ಕೆ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ವಿರುದ್ಧ ಸಿಎಂ ಎಚ್‌ಡಿ ಕುಮಾರಸ್ವಾಮಿ ಚಾಟಿ ಬೀಸಿದ್ದು, ಸಂಪೂರ್ಣ ಸಾಲ ಮನ್ನಾಗೆ ಬೇಡಿಕೆಯಿಡುವವರಿಗೆ ಓಟ್ ಹಾಕುವಾಗ ಕುಮಾರಸ್ವಾಮಿ ಯಾಕೆ ನೆನಪಿಗೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಚನ್ನಪಟ್ಟಣದಲ್ಲಿ ನಡೆದ ಜೆಡಿಎಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಮಾತನಾಡಿದ ಅವರು ಸಾಲ ಮನ್ನಾ ಮಾಡಿ ಅಂತ ರಸ್ತೆಯಲ್ಲಿ ಕೂರುವವರು ಅಂದು ಜಾತಿಭ್ರಮೆ ಬಿಟ್ಟು, ಹಣದ ವ್ಯಾಮೋಹ ಬಿಟ್ಟು, ಓಟು ಹಾಕಿದ್ರೆ ಇಂದು ಕುಮಾರಸ್ವಾಮಿಯನ್ನು ಕೇಳುವ ನೈತಿಕತೆ ಇರುತಿತ್ತು.

ನಾನು ಯಾವುದೇ ಕಾರಣಕ್ಕೂ ಹೆದರುವವನಲ್ಲ, ನಾನು ರೈತರ ಪರವಾಗಿರುವವನು. ಸಣ್ಣತನವನ್ನು ಬಿಡಿ, ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುವವನು ನಾನು. ಉತ್ತರ ಕರ್ನಾಟಕ ಬೇರೆ ದಕ್ಷಿಣ ಕರ್ನಾಟಕ ಬೇರೆ ಅಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ನನ್ನ ಗುರಿ ಎಂದು ತಿಳಿಸಿದರು.

“ನಿಮಗೆ ಪ್ರತ್ಯೇಕ ರಾಜ್ಯ ಬೇಕಾ? ಬೇರೆ ರಾಜ್ಯ ತಗೊಂಡು ಏನ್ ಆಗ್ತಿರೋ ನೋಡೋಣ. ಮತ್ತೇಕೆ ಪೂರ್ವಿಕರು ಸೇರಿ ಕರ್ನಾಟಕ ಏಕೀಕರಣ ಮಾಡಬೇಕಿತ್ತು. ಸಣ್ಣತನದಲ್ಲಿ ಜಾತಿ ಜಾತಿ ಮಧ್ಯೆ ವೈಷಮ್ಯವನ್ನುಂಟು ಮಾಡಿ, ಆ ಭಾಗ, ಈ ಭಾಗ ಅಂತ ಕಿಡಿ ಹಚ್ಚಿ, ಮುಗ್ಧ ಜನರ ಜೊತೆ ಇನ್ನೂ ಎಷ್ಟು ಚೆಲ್ಲಾಟವಾಡ್ತೀರಿ ಎಂದು ಇದೇ ವೇಳೆ ಅವರು ಪ್ರಶ್ನಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English