ಬುದ್ಧಿಮಾಂದ್ಯ ಯುವಕನನ್ನು ತಾಯಿ ಮಡಿಲಿಗೆ ಸೇರಿಸಲು ಯುವಕರ ಹರಸಾಹಸ

3:59 PM, Tuesday, July 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

disorderedಶಿವಮೊಗ್ಗ: ತೀರಾ ಹೀನಾಯ ಸ್ಥಿತಿಯಲ್ಲಿದ್ದ ಬುದ್ಧಿಮಾಂದ್ಯ ಯುವಕನೋರ್ವನನ್ನು ಸಾಗರದ ನಗರಸಭೆ ಸದಸ್ಯ ತೌಸ್ರಿಫ್ ಹಾಗೂ ಮತ್ತವರ ಗೆಳೆಯರು ಎಂಬುವರು ಶುಶ್ರೂಷೆ ಮಾಡಿ, ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಎಲ್ಲಿಂದಲೋ ಸಾಗರ ನಗರಕ್ಕೆ ಬಂದಿದ್ದ ಈತ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ. ಆತನ ಮೈಯಿಂದ ದುರ್ವಾಸನೆ ಬರುತ್ತಿತ್ತು. ಮೈಮೇಲೆ ಗಾಯಗಳಾಗಿ ಹುಳುಗಳು ಹತ್ತಿದ್ದವು. ಇದೇ ಕಾರಣಕ್ಕೆ ಆತ ಎಲ್ಲರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ. ಊಟವಿಲ್ಲದೆ ನಿತ್ರಾಣಗೊಂಡಿದ್ದ ಇವನಿಗೆ ಊಟ ನೀಡಿ, ಸ್ವಚ್ಛಗೊಳಿಸಿ, ಚಿಕಿತ್ಸೆ ಕೊಡಿಸಿದ್ದರಿಂದ ಇದೀಗ ಚೇತರಿಸಿಕೊಂಡಿದ್ದಾನೆ.

ಸೂಕ್ತ ಚಿಕಿತ್ಸೆ ಕೊಡಿಸಿದ ಬಳಿಕ ಆತನನ್ನು ಹೊಸನಗರ ತಾಲೂಕು ಚಿಕ್ಕಜೇನಿ ಗ್ರಾಮದಲ್ಲಿರುವ ಪ್ರಭಾಕರ್ ಅವರ ಅನಾಥಾಶ್ರಮದಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಅನಾಥಾಶ್ರಮ ಸೇರಿದ ಬಳಿಕ ಈತ ತನ್ನ ಹೆಸರನ್ನು ಬರೆಯಲಾರಂಭಿಸಿದ್ದಾನೆ. ಆತನ ಹೆಸರು ಗೌರವ್ ಮಿಲಿಂದ್ ಪಾಟೀಲ್ ಎಂದು ತಿಳಿದು ಬಂದಿದೆ. ಹೀಗೆ ವಿಚಾರಿಸಿದಾಗ ಆತನ ಆಯಿ ಆಯಿ ಎಂದು ತನ್ನ ತಾಯಿಯ ಹೆಸರು ಸಹ ಹೇಳಿದ್ದಾನೆ. ಬಳಿಕ ಊರಿನ ಬಗ್ಗೆ ವಿಚಾರಿಸಿದಾಗ ಕನ್ನಾಡ್ ಎಂದು ಹೇಳಿದ್ದಾನೆ. ಇದರ ಹೊರತಾಗಿ ಈತ ಬೇರೇನೂ ಹೇಳುತ್ತಿಲ್ಲ.

ಇಷ್ಟು ಮಾಹಿತಿ ತಿಳಿದ ತೌಸ್ರಿಫ್ ಹಾಗೂ ಆತನ ಸ್ನೇಹಿತರು ಕನ್ನಾಡ್ ಪೊಲೀಸ್ ಠಾಣೆಗೆ ಸಂಪರ್ಕಿಸಿ ವಿಚಾರಿಸಿದ್ದಾರೆ. ಆದರೆ ಯಾವುದೇ ಉಪಯೋಗವಾಗಿಲ್ಲ. ಸಾಗರದಲ್ಲಿ ಆಧಾರ್ ಕಾರ್ಡ್ ಮಾಹಿತಿ ಕಲೆಹಾಕಲೂ ಪ್ರಯತ್ನಿಸಿದ್ದಾರೆ. ಅದೂ ಫಲಕೊಟ್ಟಿಲ್ಲ. ನಂತರ ನೇರವಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಬಳಿ ಕರೆತಂದಿದ್ದಾರೆ. ಜಿಲ್ಲಾಧಿಕಾರಿ ಡಾ. ಲೊಕೇಶ್ ಕೂಡಲೇ ಆಧಾರ್ ಕಾರ್ಡ್ ವಿಭಾಗದ ಅಧಿಕಾರಿಗಳನ್ನು ಕರೆದು ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದರು.

ಈ ಪ್ರಯತ್ನದಲ್ಲಿ ಗೌರವ್ಗೆ ಆಧಾರ್ ಕಾರ್ಡ್ ಮಾಡಿಸಿರುವುದು ದೃಢಪಟ್ಟಿದ್ದರೂ ಸಹ ಆತನ ಹೆಸರಿನ ಸ್ಪೆಲ್ಲಿಂಗ್ಗಳು ಮ್ಯಾಚ್ ಆಗದಿರುವುದ್ದಕ್ಕೆ ವಿಳಾಸ ಪತ್ತೆಯಾಗಲಿಲ್ಲ. ಈಗ ಹೊಸದಾಗಿ ಆಧಾರ್ಗೆ ಅರ್ಜಿ ಹಾಕಲಾಗಿದ್ದು, ಇದರಿಂದ ಹಳೆಯ ಆಧಾರ್ ರದ್ದಾಗುವ ಹಂತದಲ್ಲಿ ಯಾವ ವಿಳಾಸದಲ್ಲಿ ಆಧಾರ್ ಕಾರ್ಡ್ ಪಡೆದಿದ್ದಾನೆ ಎಂಬ ಮಾಹಿತಿ ಸಿಗುತ್ತದೆ.

ಹೀಗಾಗಿ ಬುದ್ಧಿಮಾಂದ್ಯನನ್ನು ರಕ್ಷಿಸಿದ ಸಾಗರದ ಯುವಕರು ಹೇಗಾದರೂ ಮಾಡಿ ಆತನ ತಾಯಿಯ ಮಡಿಲಿಗೆ ಸೇರಿಸಬೇಕು ಎಂದು ಪಣ ತೊಟ್ಟಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English