ಮಂಗಳೂರು : ತುಳುನಾಡಿನ ಸಂಸ್ಕೃತಿ ವಿಶ್ವಕ್ಕೆ ಮಾದರಿ, ತುಳುಭಾಷೆ ಅತ್ಯಂತ ಪುರಾತನ ಭಾಷೆ. ಇಲ್ಲಿನ ಕಲೆ ಹಾಗೂ ಸಂಸ್ಕೃತಿ ದೇಶಕ್ಕೇ ಉನ್ನತ ಹೆಸರು ತಂದು ಕೊಟ್ಟಿದೆ. ತುಳುನಾಡಿನ ಸಂಸ್ಕೃತಿಯನ್ನು ಮೇಲೈಸಿದ ಕಲಾವಿದರ ಪೈಕಿ ದಿವಂಗತ ಕೆ.ಎನ್. ಟೇಲರ್ ಒಬ್ಬರು. ಇವರು ತುಳು ಚಿತ್ರರಂಗದ ಮೊದಲ ಸೂಪರ್ ಸ್ಟಾರ್. ಅಭಿಮಾನಿಗಳ ಪಾಲಿಗೆ ತುಳು ಸಿನಿಮಾದ ಭೀಷ್ಮ. ದಿನಾಂಕ 1-09-1939 ರಲ್ಲಿ ಹುಟ್ಟಿದ ಇವರು, ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮುಗಿಸಿ ಟೇಲರ್ ವೃತ್ತಿಯನ್ನು ನಡೆಸುತ್ತಿದ್ದ ಇವರು, ತುಳು ಕಲಾರಂಗದಲ್ಲಿ ಶ್ರಮ ವಹಿಸಿ ನಿಷ್ಟಾವಂತರಾಗಿ ದುಡಿದು ತುಳು ಕಲಾರಂಗವನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರು ಕಥೆ, ಚಿತ್ರಕಥೆ, ನಟನೆ, ನಿರ್ದೇಶನ ಹಾಗೂ ನಿರ್ಮಾಪಕರಾಗಿಯೂ ಕೆಲಸ ಮಾಡಿದವರು. ಇವರ ಪ್ರಮುಖ ತುಳು ಚಿತ್ರಗಳು ದಾರೆದ ಬುಡದಿ, ಪಗೆತ ಪುಗೆ, ಬಿಸತಿ ಬಾಬು, ಏನ್ ಸನ್ಯಾಸಿ ಆಪೆ. ಅತ್ಯಂತ ಕಷ್ಟ ಕಾಲದಲ್ಲಿ ಆಧುನಿಕ ವ್ಯವಸ್ಥೆಗಳನ್ನು ಸರಿಯಾಗಿ ಕೈಗೆಟುಕುವ ಸಮಯದಲ್ಲಿ ಚಿತ್ರರಂಗ, ನಾಟಕ ರಂಗವನ್ನು ವಿಶಿಷ್ಟ ರೀತಿಯಲ್ಲಿ ಪ್ರಚಾರ ಪಡಿಸಿದವರಲ್ಲಿ ಇವರೂ ಒಬ್ಬರು. ಹಲವಾರು ಕಲಾವಿದರನ್ನು ಹುಟ್ಟು ಹಾಕಿದ ಗುರು ಇವರು. ಕಲಾವಿದರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಇವರು ಸ್ವತಃ 1958 ಲ್ಲಿ ಶ್ರೀ ಗಣೇಶ ನಾಟಕ ಸಭಾ ಎಂಬ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿ ದೇಶ, ವಿದೇಶದಲ್ಲಿ ನಾಟಕಗಳನ್ನು ಏರ್ಪಡಿಸಿ ಕಲೆಯನ್ನು ಪಸರಿಸಿದರು. ಹಾಗೂ ಈ ಮೂಲಕ ಹಲವಾರು ಕಲಾವಿದರಿಗೆ ಹಾಗೂ ಅವರ ಕುಟುಂಬಕ್ಕೆ ಅನ್ನ ನೀಡಿದರು. ಮಂಗಳೂರಿನ ಪುರಭವನದಲ್ಲಿ ಸತತವಾಗಿ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ಪುರಭವನದ ಘನತೆ, ಕೀರ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1958 ರಲ್ಲಿ ಇವರ ಭಾಗ್ಯವಂತ ತುಳು ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ.
ಇವರು ತುಳು ಭಾಷೆ ಹಾಗೂ ತುಳು ನಾಟಕ, ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 1959 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 1994 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2014 ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಮಾರ್ಚ್ 18 ರಂದು, 2015 ರಂದು ಇವರ ನಿಧನದಿಂದ ತುಳುನಾಟಕ, ಸಿನಿಮಾರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಆದರೆ ಸರಕಾರ ಮಾತ್ರ ಅವರಿಗೆ ಇದುವರೆಗೂ ಯಾವುದೇ ಗೌರವ ನೀಡಿಲ್ಲ. ಈ ಮೂಲಕ ತುಳುರಂಗಭೂಮಿ ಮತ್ತು ತುಳು ಚಿತ್ರರಂಗದ ಪಿತಾಮಹ ಎಂದೇ ಖ್ಯಾತನಾಮರಾದ ಕಲಾವಿದಗೆ ಅನ್ಯಾಯ ಮಾಡಲಾಗುತ್ತಿದೆ. ಅದಕ್ಕಾಗಿ ತುಳುನಾಡ ರಕ್ಷಣಾ ವೇದಿಕೆಯು ಕಳೆದ ವರ್ಷ 2016ರಂದು, ಮಂಗಳೂರಿನ ಪುರಭವನದ ಮುಂಭಾಗದಲ್ಲಿರುವ ವೃತ್ತಕ್ಕೆ ದಿ| ಕೆ.ಎನ್. ಟೇಲರ್ ವೃತ್ತವೆಂದು ನಾಮಕರಣ ಮಾಡಿ, ಆ ವೃತ್ತದಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕೆಂದು ಹಕ್ಕೊತ್ತಾಯ ಸಭೆಯನ್ನು ಏರ್ಪಡಿಸಿತ್ತು. ಈ ಹೋರಾಟದಲ್ಲಿ ತುಳು ಚಿತ್ರರಂಗದ ನಟರು, ತುಳು ರಂಗಭೂಮಿ ಕಲಾವಿದರು ಹಾಗೂ ಅವರ ಅಭಿಮಾನಿಗಳು ಭಾಗವಹಿಸಿದ್ದರು. ಈ ಸಂದರ್ಭ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೂ ತುಳುನಾಡಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೌನವಹಿಸಿರುವುದು ಕೆ.ಎನ್. ಟೇಲರ್ ಅವರಿಗೆ ಮಾಡುತ್ತಿರುವ ಅವಮಾನ. ಈ ನಿಟ್ಟಿನಲ್ಲಿ ನೀವು ದಿವಂಗತ ಕೆ.ಎನ್. ಟೇಲರ್ ರವರ ಹೆಸರನ್ನು ಶಾಶ್ವತವಾಗಿ ಉಳಿಸುವಂತೆ ಮಾಡಲು ಮಂಗಳೂರು ನಗರದ ವೃತ್ತ, ರಸ್ತೆ ಅಥವಾ ಭವನಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿತ್ತಾಯಿಸಿದೆ.
Click this button or press Ctrl+G to toggle between Kannada and English