ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಹೆಸರು ಬದಲಾವಣೆ ಮಾಡಿ ವಿಧಾನಸಭೆಯಲ್ಲಿ ಮಸೂದೆ ಮಂಡನೆ ಮಾಡಿದ್ದಾರೆ. ಹೀಗಾಗಿ ಇನ್ಮುಂದೆ ಪಶ್ಚಿಮ ಬಂಗಾಳ ಬದಲಿಗೆ ರಾಜ್ಯದ ಹೆಸರು ;ಬಾಂಗ್ಲಾ’ ಎಂದು ಮರು ನಾಮಕರಣಗೊಳ್ಳಲಿದೆ.
ಮಮತಾ ಬ್ಯಾನರ್ಜಿ ಸರ್ಕಾರದ ಈ ಮಸೂದೆಗೆ ಬಿಜೆಪಿ ಹಾಗೂ ಸಿಪಿಐಎಂ ಪಕ್ಷಗಳು ಬೆಂಬಲಿಸಿದ್ದು, ಸರ್ವಾನುಮತದಿಂದ ವಿಧೇಯಕವನ್ನ ಅಲ್ಲಿನ ವಿಧಾನಸಭೆಯಲ್ಲಿ ಪಾಸ್ ಮಾಡಲಾಗಿದೆ.
ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮಂಡಿಸಿ, ಅನುಮೋದನೆ ಪಡೆದಿರುವ ಈ ಮಸೂದೆಯನ್ನ , ಕೇಂದ್ರದ ಅನುಮೋದನೆಗೆ ಕಳುಹಿಸಿಕೊಡಬೇಕಿದೆ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸಿಎಂ ಮಮತಾ ಬ್ಯಾನರ್ಜಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯದ ಹೆಸರು ಬದಲಾಣೆಗೆ ಈ ಹಿಂದೆಯೇ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಮುಂದಾಗಿತ್ತಾದರೂ ಇದಕ್ಕೆ ಪರ-ವಿರೋಧ ಚರ್ಚೆಗಳು ಎದುರಾಗಿದ್ದರಿಂದ ಕೆಲ ಕಾಲ ಈ ವಿವಾದಕ್ಕೆ ಬ್ರೇಕ್ ಬಿದ್ದಿತ್ತು.
ಇದೀಗ ಸ್ವತಃ ತೃಣಮೂಲ ಕಾಂಗ್ರೆಸ್ ಪಕ್ಷ ಬಂಗಾಳ ವಿಧಾನಸಭೆಯಲ್ಲಿ ಈ ಬಗ್ಗೆ ಮಸೂದೆಯನ್ನು ಮಂಡಿಸುವ ಮೂಲಕ ಮತ್ತೆ ಹಳೆಯ ವಿವಾದಕ್ಕೆ ನೀರೆರದಿದೆ.ಇಂದು ನಡೆದ ವಿಧಾನಸಭೆ ಕಲಾಪದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಪಶ್ಚಿಮ ಬಂಗಾಳವನ್ನು ‘ಬಾಂಗ್ಲಾ’ ಎಂದು ಮರು ನಾಮಕರಣ ಮಾಡುವ ಮಸೂದೆಯನ್ನು ಮಂಡಿಸಿತು. ಇದಕ್ಕೆ ಟಿಎಂಸಿ ಸೇರಿದಂತೆ ಕೆಲ ಸ್ಥಳೀಯ ಪಕ್ಷೇತರ ಶಾಸಕರೂ ಬೆಂಬಲ ನೀಡುವುದರೊಂದಿಗೆ ಮಸೂದೆಗೆ ಅನುಮೋದನೆ ದೊರೆತಿದೆ
ಇನ್ನು ಈ ಹಿಂದೆ ಅಂದರೆ, ಕಳೆದ ವರ್ಷವೇ ಪಶ್ಚಿಮ ಬಂಗಾಳ ಸರ್ಕಾರ ಹೆಸರು ಬದಲಾವಣೆದೆ ಮಸೂದೆ ಮಂಡಿಸಿ ಅನುಮೋದನೆಯನ್ನೂ ಪಡೆದಿತ್ತು. ಆದರೆ ಇಂಗ್ಲಿಷ್ನಲ್ಲಿ ಬೆಂಗಾಲ್ ಎಂದು ಬೆಂಗಾಲಿ ಮತ್ತು ಹಿಂದಿ ಭಾಷೆಯಲ್ಲಿ ಬಾಂಗ್ಲಾ ಎಂದು ನಾಮಕರಣ ಮಾಡಲು ಮುಂದಾಗಿತ್ತು. ಆದರೆ ಸರ್ಕಾರದ ಈ ಪ್ರಸ್ತಾಪಕ್ಕೆ ಗೃಹಸಚಿವಾಲಯ ಅನುಮೋದನೆ ನೀಡಿರಲಿಲ್ಲ.
Click this button or press Ctrl+G to toggle between Kannada and English