ಮಂಗಳೂರು: ಶಾಸ್ತ್ರ ಓದಿದ್ದು ಸಾಕು, ಇನ್ನು ಶಸ್ತ್ರಾಸ್ತ್ರವನ್ನೂ ಹಿಡಿಯಬಲ್ಲೆವು ಎಂಬುದನ್ನು ಜಗತ್ತಿಗೆ ತೋರಿಸುವ ಸಮಯ ಈಗ ಬಂದಿದೆ ಎಂದು ಮಹಿಳಾ ಮಾತೃ ಮಂಡಳಿಯ ಅಧ್ಯಕ್ಷೆ ಹೇಳಿಕೆ ನೀಡಿದ್ದಾರೆ.
ಮಂಗಳೂರಿನ ವಾಮಂಜೂರಿನಲ್ಲಿ ಗೋ ಕಳ್ಳತನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ನಮ್ಮ ರಕ್ಷಣೆಯನ್ನು ನಾವೇ ಮಾಡಬೇಕಾಗಿದೆ. ಕೇವಲ ಯುವಕರು ಮಾತ್ರ ರಕ್ಷಣೆಗೆ ಮುಂದಾದರೆ ಸಾಲದು. ಮಹಿಳೆಯರು ಕೂಡ ಈ ವಿಚಾರದಲ್ಲಿ ಮುಂದಾಗಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ವಿ.ಹೆಚ್.ಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಗೋ ಕಳ್ಳತನ ಮುಂದುವರೆದರೆ ಸಂಘಟನೆಯಿಂದಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್, ಇಸ್ಲಾಂ ಧರ್ಮದ ಪ್ರಕಾರ ಕಳ್ಳತನಕ್ಕೆ ಅವಕಾಶವಿಲ್ಲ. ಇಸ್ಲಾಂ ಫತ್ವಾ ಹೊರಡಿಸುವ ಮೂಲಕ ಕಳ್ಳತನಕ್ಕೆ ಶಿಕ್ಷೆ ಹೊರಡಿಸಲಿ. ಉಳಿದ ವಿಷಯದಲ್ಲಿ ಫತ್ವಾ ಹೊರಡಿಸುವ ಮೌಲ್ವಿಗಳಿ ಗೋ ಕಳ್ಳತನದ ವಿರುದ್ಧ ಫತ್ವಾ ಹೊರಡಿಸಿದರೆ ಅದನ್ನು ಗೌರವಿಸಲಾಗುವುದು. ಮಂಗಳೂರಿನಲ್ಲಿ ಗೋರಕ್ಷಕ ದಳ ರಚನೆ ವಿಚಾರದಲ್ಲಿ ಎಸ್ಡಿಪಿಐ ಪೊಲೀಸ್ ಕಮೀಷನರ್ಗೆ ಬಜರಂಗದಳ, ವಿ.ಎಚ್.ಪಿ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿದೆ. ಇದರಿಂದ ಎಸ್ಡಿಪಿಐ ಮೇಲೆ ಸಂಶಯ ಮೂಡುತ್ತಿದೆ ಎಂದರು.
Click this button or press Ctrl+G to toggle between Kannada and English