ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತಕ್ಕೊಳಪಟ್ಟ ಕೆ.ಎಸ್.ಎಸ್ ಕಾಲೇಜಿನಲ್ಲಿ ಆರು ಮಂದಿ ಅವಳಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಇಷ್ಟು ಸಂಖ್ಯೆಯ ಅವಳಿಗಳು ಪ್ರಥಮ ವರ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹಿಂದೆ ಕಾಲೇಜಿನಲ್ಲಿ ಮೂರರಿಂದ ನಾಲ್ಕು ಜೊತೆ ಅವಳಿ ಸಹೋದರ-ಸಹೋದರಿಗಳು ವ್ಯಾಸಂಗ ಮಾಡಿದ್ದರು. ಈ ವರ್ಷ ಪ್ರಥಮ ಕಲಾ ಮತ್ತು ಪ್ರಥಮ ವಾಣಿಜ್ಯ ಪದವಿಯ ತರಗತಿಗಳಲ್ಲಿ ಒಟ್ಟಾಗಿ 12 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ.
ಕೊಣಾಜೆಯ ಜಯರಾಮ.ಡಿ ಮತ್ತು ಕುಸುಮ.ಡಿ ದಂಪತಿಗಳ ಪುತ್ರಿಯರಾದ ಕೃಪಾ.ಡಿ.ಜೆ ಮತ್ತು ಕೃತಿ ಡಿ.ಜೆ, ಹೊಸ್ಮಠದ ದೇಜಪ್ಪ ಗೌಡ ಮತ್ತು ವಾರಿಜ ದಂಪತಿಗಳ ಪುತ್ರಿಯರಾದ ದಿವ್ಯಾ.ಕೆ ಮತ್ತು ದೀಪಿಕಾ.ಕೆ, ಬೀದಿಗುಡ್ಡೆಯ ಹರಿಶ್ಚಂದ್ರ ಗೌಡ ಮತ್ತು ಉಷಾ ದಂಪತಿಗಳ ಪುತ್ರಿಯರಾದ ಹರ್ಷಾ.ಬಿ ಮತ್ತು ಹರ್ಷಿತಾ.ಬಿ, ಪೇರಮಜಲು ದೇವಪ್ಪ.ಎಂ ಮತ್ತು ಶಾರದಾ ದಂಪತಿಗಳ ಪುತ್ರರಾದ ಸಂಕೇತ್.ಡಿ ಮತ್ತು ಸಂಜೀತ್.ಡಿ, ಕೀಲಂಗೋಡಿಯ ವಾಸುದೇವ ಆಚಾರ್ ಮತ್ತು ಸುಮಾ.ವಿ.ಆಚಾರ್ ದಂಪತಿಗಳ ಪುತ್ರರಾದ ಸುಜನ್ ಕೆ.ವಿ ಮತ್ತು ಸುಜಿತ್ ಕೆ.ವಿ, ನೆಟ್ಟಣದ ಪುಟ್ಟಣ್ಣ ಗೌಡ ಮತ್ತು ಕಮಲ ದಂಪತಿಗಳ ಪುತ್ರರಾದ ಮೇಘಶ್ಯಾಮ್.ಎನ್.ಪಿ ಮತ್ತು ಮೇಘರಾಜ್.ಎನ್.ಪಿ ಕೆ.ಎಸ್.ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ಮತ್ತು ಬಿಕಾಂ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರು ಸಹೋದರ-ಸಹೋದರಿ ಜೋಡಿಗಳಾಗಿದ್ದಾರೆ.
Click this button or press Ctrl+G to toggle between Kannada and English