ಪೊಲೀಸರ ಭರ್ಜರಿ ಬೇಟೆ..ಮಂಗಳೂರಲ್ಲಿ ಹಲವು ಗೋಕಳ್ಳರ ಸೆರೆ!

9:44 AM, Saturday, July 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

arrestedಮಂಗಳೂರು: ಇತ್ತೀಚೆಗೆ ಗೋಕಳ್ಳತನ ಪ್ರಕರಣಗಳು ಸತತವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಹಲವಡೆ ನಡೆಸಿದ ಕಾರ್ಯಾಚರಣೆಗಳಲ್ಲಿ ಹಲವು ಗೋಕಳ್ಳರನ್ನು ಬಂಧಿಸಲಾಗಿದೆ.

ಮಂಗಳೂರಿನ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಗೋಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಟ್ವಾಳ ಅಮ್ಮೆಮಾರ್ ನಿವಾಸಿ ಇಮ್ರಾನ್ ಅಲಿಯಾಸ್ ಕುಟ್ಟ ಇಮ್ರಾನ್ (27), ಬಜ್ಪೆಯ ಶಾಂತಿಗುಡ್ಡೆಯ ನಿವಾಸಿ ಉಮ್ಮರ್ ಫಾರೂಕ್ (32) ಬಂಧಿತ ಆರೋಪಿಗಳು. ಬಂಧಿತರಿಂದ ಸ್ಕಾರ್ಪಿಯೋ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರು ಜುಲೈ 17ರಂದು ಮೂಡುಶೆಡ್ಡೆಯ ಬೈಲು ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿ ತಲವಾರು ತೋರಿಸಿ ಜಾನುವಾರುಗಳನ್ನು ಕಳವುಗೈದಿದ್ದರು. ಬಂಧಿತರಿಬ್ಬರೂ ಕುಖ್ಯಾತ ದನಕಳ್ಳರಾಗಿದ್ದು, ಇವರ ವಿರುದ್ಧ ಹಲವು ಠಾಣೆಗಳಲ್ಲಿ ಗೋಕಳ್ಳತನ ಪ್ರಕರಣಗಳು ದಾಖಲಾಗಿವೆ.

2018ರ ಜುಲೈ 5ರಂದು ಮಂಗಳೂರಿನ ಗೂಡ್ಸ್ ಶೆಡ್ ಬಳಿ ನಡೆದಿದ್ದ ಪಾಂಡೇಶ್ವರ ದೇವಾಲಯಕ್ಕೆ ಸೇರಿದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕಸಬಾ ಬೆಂಗ್ರೆಯ ಕಬೀರ್ ಮಂಝಿಲ್ ನಿವಾಸಿ ಅಬ್ದುಲ್ ಕಬೀರ್ ಅಲಿಯಾಸ್ ಪಾರಿವಾಳ ಕಬೀರ್ ( 30) ಬಂಧಿತ ಆರೋಪಿ. ಈತ ಕೃತ್ಯಕ್ಕೆ ಬಳಸಿದ ಕಾರೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ಕೂಡ ಕುಖ್ಯಾತ ಖದೀಮನಾಗಿದ್ದು, ಈತನ ವಿರುದ್ಧವೂ ನಗರವ್ಯಾಪ್ತಿಯ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಇನ್ನು ಮೂಡುಬಿದಿರೆ ಠಾಣಾ ವ್ಯಾಪ್ತಿಯ ಮೂರು ಕಡೆಗಳಲ್ಲಿ ನಡೆದ ಗೋಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ತಾಲೂಕಿನ ಮಿಜಾರು ಬಡಗೆಡಪದವಿನ ತೋಡಾರು ಅರ್ಗಮನೆ ನಿವಾಸಿ ಕೆ. ಅಬ್ದುಲ್ ಬಶೀರ್ ಅಲಿಯಾಸ್ ಅರ್ಗ ಬಶೀರ್ (42) ಬಂಧಿತ ಆರೋಪಿ. ಈತ 2017ರಲ್ಲಿ ಮೂಡುಬಿದಿರೆ ಠಾಣಾ ವ್ಯಾಪ್ತಿಯ ರಿಂಗ್ ರೋಡ್, ಒಂಟಿಕಟ್ಟೆ ಮತ್ತು ಬೊಗ್ರುಗುಡ್ಡೆ ಪರಿಸರದಲ್ಲಿ ಕಟ್ಟಿಹಾಕಿದ್ದ ದನಗಳನ್ನು ಕಳವುಗೈದಿದ್ದ. ಈತ ಕುಖ್ಯಾತ ಆರೋಪಿಯಾಗಿದ್ದು, ಈತನ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಒಟ್ಟು 7 ಪ್ರಕರಣಗಳು ದಾಖಲಾಗಿವೆ.

ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್ ಅವರ ಆದೇಶದ ಮೇರೆಗೆ ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ್, ಎಸ್ಐ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್, ಎಎಸ್ಐ ಶಶಿಧರ್ ಶೆಟ್ಟಿ, ಸಿಬ್ಬಂದಿ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ್, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ್, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ರಾಜ, ಆಶಿತ್ ಡಿಸೋಜ, ತೇಜಕುಮಾರ್ ಮತ್ತು ರಿತೇಶ್ ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English