ಉಡುಪಿ: ಸೌದಿಯಲ್ಲಿ ಶಿರ್ವ ಮೂಲದ ನರ್ಸ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾದಲ್ಲಿ ಸಾವಿನ ಕುರಿತ ತನಿಖೆ ಪ್ರಾರಂಭವಾಗಿದೆ.
ನರ್ಸ್ ಹೆಝಲ್ ರೂಮಿನಲ್ಲಿದ್ದವರನ್ನು ವಶಕ್ಕೆ ಪಡೆದ ಸೌದಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸೌದಿಯ ಆರೋಗ್ಯ ಇಲಾಖೆಯ ಆಸ್ಪತ್ರೆಯಲ್ಲಿ ಆರು ವರ್ಷಗಳಿಂದ ನರ್ಸ್ ಆಗಿದ್ದ ಹೆಝಲ್ ಜುಲೈ 19 ರಂದು ಪತಿ ಅಶ್ವಿನ್ ಮಥಾಯಿಸ್ರೊಂದಿಗೆ ಮಾತನಾಡಿದ್ದೇ ಕೊನೆ. ಅದಾಗಿ ಎರಡು ದಿನಗಳ ಬಳಿಕ ಸಹೋದ್ಯೋಗಿ ಮೂಲಕ ಸಾವನ್ನಪ್ಪಿರುವ ಮಾಹಿತಿ ಬಂದಿದೆ. ಆದರೆ, ಸಾವು ಹೇಗೆ ಸಂಭವಿಸಿತು. ಎಲ್ಲಿ ಸಂಭವಿಸಿತು ಎಂಬ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.
ಈ ಸಂಬಂಧ ಕರಾವಳಿಯ ಜನಪ್ರತಿನಿಧಿಗಳು ವಿದೇಶಾಂಗ ಸಚಿವರನ್ನು ಸಂಪರ್ಕಿಸಿದ್ದಾರೆ. ಸೌದಿಯಲ್ಲಿ ಕಠಿಣ ಕಾನೂನು ಇರುವ ಕಾರಣ ಮೃತದೇಹ ಬರಲು ಇನ್ನೂ ಎರಡು ವಾರ ಆಗುವ ಸಾಧ್ಯತೆ ಇದೆ. ಶವಪರೀಕ್ಷೆ , ಸ್ಥಳ ತನಿಖೆ ವರದಿಯನ್ನು ಅಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕವೇ ಮೃತದೇಹ ಊರಿಗೆ ರವಾನೆ ಆಗಲಿದೆ ಎಂದು ತಿಳಿದು ಬಂದಿದೆ.
Click this button or press Ctrl+G to toggle between Kannada and English