ವಾಷಿಂಗ್ಟನ್ : ಹಿಂದೂಗಳು ಪೂಜಿಸುವ ದೇವರು ಮತ್ತು ದೇವತೆಗಳನ್ನು ಕಾಲಿಗೆ ಹಾಕುವ ಶೂಗಳಿಗೆ ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಹಿಂದೂ ಸಮುದಾಯದಿಂದ ತೀವ್ರ ಆಕ್ಷೇಪ ಕ್ಕೆ ಗುರಿಯಾಗಿದೆ.
ಅಮೆರಿಕದ ಗಿಟಾರ್ ವಾದಕ ದಿವಂಗತ ಜಿಮಿ ಹೆಂಡ್ರಿಕ್ಸ್ ಹೆಸರಿನಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಲಾಗಿತ್ತು . ಹಿಂದೂಗಳ ವಿರೋಧ ಹಾಗೂ ಪ್ರತಿಭಟನೆಗೆ ಮಣಿದ ಅಮೆರಿಕ ಮೂಲದ ಶೂ ಕಂಪನಿ ಶೂಗಳನ್ನು ಮಾರಾಟ ಮಾಡದೆ ಮಾರುಕಟ್ಟೆಯಿಂದ ವಾಪಸ್ ಪಡೆದಿದೆ.
ಶೂನಲ್ಲಿ ಹಿಂದೂ ದೇವರ ಚಿತ್ರಗಳನ್ನು ಚಿತ್ರಿಸಿದ್ದಕ್ಕೆ ಹಿಂದೂ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ ಕ್ಷಮೆಯಾಚಿಸಿದ ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ವಿಶೇಷ ಡಿಸೈನ್‌ನ ಶೂಗಳನ್ನು ವಾಪಸ್ ಪಡೆದಿರುವುದಾಗಿ ಅಮೆರಿಕನ್ ಶೂ ಕಂಪೆನಿ ತಿಳಿಸಿದೆ.
ಇದು ಉದ್ದೇಶಪೂರ್ವಕವಾಗಿ ನಡೆದ ಅಪರಾಧವಲ್ಲ ಈ ತಪ್ಪಿಗಾಗಿ ಹಿಂದೂ ಸಮುದಾಯದವರಲ್ಲಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಶೂ ಕಂಪನಿಯ ವಕ್ತಾರೆ ಜೆಸ್ಸಿಕಾ ಹೇಳಿದ್ದಾರೆ.
ಹೂಸ್ಟನ್ ಮೂಲದ ಮಹಿಳೆ ಬೆಥ್ ಕುಲಕರ್ಣಿ ಈ ಪ್ರಕರಣಕ್ಕೆ ಧ್ವನಿ ಎತ್ತಿದ್ದರು. ಹಿಂದೂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಶೂ ಕಂಪನಿ ಇ-ಮೇಲ್ ಮೂಲಕ ಕ್ಷಮಾಪಣೆಯನ್ನು ಕೇಳಿದೆ.
Click this button or press Ctrl+G to toggle between Kannada and English
October 7th, 2011 at 22:22:11
prathibatisabeku