ಹುಬ್ಬಳ್ಳಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಇತ್ತೀಚೆಗೆ ನಗರದಲ್ಲಿ ಬಂಧಿಸಿರುವ ಇಬ್ಬರು ಆರೋಪಿಗಳ ಮನೆಯಲ್ಲಿ ಭಾನುವಾರ ಎಸ್‌ಐಟಿ ಅಧಿಕಾರಿಗಳು ತಪಾಸಣೆ ನಡೆಸಿದರು.
ಶನಿವಾರದಿಂದಲೇ ಆರೋಪಿಗಳಾದ ಗಣೇಶ ಮಿಸ್ಕಿನ್ ಹಾಗೂ ಅಮಿತ ಬದ್ದಿಯವರ ಮನೆಯಲ್ಲಿ ಎಸ್‌ಐಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಇದುವರೆಗೂ ಯಾವುದೇ ದಾಖಲೆಗಳು ಹಾಗೂ ಪುರಾವೆಗಳು ದೊರೆತಿಲ್ಲ.
ಕೇಶ್ವಾಪುರ ಭಾಗದ ಚೈತನ್ಯ ನಗರದಲ್ಲಿರುವ ಗಣೇಶ ಮನೆ ಹಾಗೂ ದಾಜೀಬಾನ ಪೇಟೆಯ ತಾಡಪತ್ರಿ ಗಲ್ಲಿಯಲ್ಲಿರುವ ಅಮಿತ್ ಮನೆಯ ಸದಸ್ಯರನ್ನು ಹೊರಗೆ ಕಳುಹಿಸಿ ಆರೋಪಿಗಳೊಂದಿಗೆ ಎಸ್‌ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ ಎಂದು ಇಬ್ಬರೂ ಆರೋಪಿಗಳ ಪೋಷಕರು ಎಸ್‌ಐಟಿ ಅಧಿಕಾರಿಗಳಿಗೆ ಕಣ್ಣೀರಿಡುತ್ತಾ ಗೋಗರೆಯುತ್ತಿದ್ದಾರೆ.
ಇಬ್ಬರೂ ಆರೋಪಿಗಳು ರೌಡಿ ಶೀಟರ್ ಗಳಾಗಿದ್ದಾರೆ. ಬಂಧಿತ ಆರೋಪಿಗಳು ಅಮಾಯಕರಾಗಿದ್ದು, ಅವರನ್ನು ಬಿಡುಗಡೆಗೊಳಿಸಬೇಕೆಂದು ಹಲವಾರು ಸಂಘಟನೆಗಳು ಪ್ರತಿಭಟಿಸುತ್ತಿವೆ.
Click this button or press Ctrl+G to toggle between Kannada and English