ಮೂಡಬಿದಿರೆ : ವಿದ್ಯಾರ್ಥಿನಿಯೊಬ್ಬಳು ತನಗೆ ಖಾಯಿಲೆ ಇದ್ದರೂ ಮನೆಯವರಿಗೆ ತಿಳಿಸದೆ ಮುಚ್ಚಿಟ್ಟ ಪರಿಣಾಮ ಆಕೆ ತನ್ನ ಜೀವವನ್ನೇ ತೆರಬೇಕಾಯಿತು. ಆಕೆಗಿನ್ನೂ ಹತ್ತೊಂಬತ್ತು ವರ್ಷಪ್ರಾಯ ಮೂಡಬಿದ್ರೆಯ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವತೀಯ ಬಿಕಾಂ ವಿದ್ಯಾರ್ಥಿನಿ.
ಮೂಡಬಿದ್ರೆಯ ನೀರ್ಕರೆಯ ಅಶ್ವತ್ಥಪುರ ನಿವಾಸಿ ಕೃಷ್ಣ ಪುಜಾರಿ ಎಂಬವಳ ಮಗಳು ಯಕ್ಷಿತಾ ಎಂಬವಳು ಮೃತ ಪಟ್ಟ ದುರ್ದೈವಿ.
ಆಕೆಯ ಅಶ್ವಸ್ಥತೆಯ ಬಗ್ಗೆ ಸ್ವತಃ ಆಕೆಗೆ ಮಾತ್ರ ತಿಳಿದಿತ್ತು. ಸಕ್ಕರೆಕಾಯಿಲೆ ಮತ್ತು ರಕ್ತದೊತ್ತಡ ಆಕೆಯನ್ನು ಕಾಡುತ್ತಿತ್ತು. ಆಕೆಗೆ ಸುಸ್ತಾಗುತ್ತಿತ್ತು, ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಮಾಡುತ್ತಿದ್ದರೆ ರೋಗ ಗುಣವಾಗುತ್ತಿತ್ತು. ಆದರೆ ಆಕೆ ಅದನ್ನು ಹೇಳಲೇ ಇಲ್ಲ.
ತಂದೆ ಟೈಲರಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು, ಅದರೆ ಇತ್ತೀಚೆಗೆ ಕಾಲುನೋವು ಕಾಣಿಸಿಕೊಂಡಿದ್ದರಿಂದ ಟೈಲರಿಂಗ್ ಕೆಲಸ ನಿಲ್ಲಿಸಿದ್ದರು. ಆಕೆಯ ಸಹೋದರಿ ಮೂಡಬಿದ್ರೆಯ ಬಿಲ್ಲವ ಸಂಘದಲ್ಲಿ ಟೈಲರಿಗ್ ತರಬೇತಿ ಪಡೆಯುತ್ತಿದ್ದಳು. ಬಡತನದಲ್ಲಿದ್ದ ಹೆತ್ತವರಿಗೆ ತೊಂದರೆ ನೀಡುವುದು ಬೇಡವೆಂದು ಯೋಚಿಸಿ ಕಾಯಿಲೆ ಗುಣಮುಖವಾಗ ಬಹುದೆಂದು ನಂಬಿಕೆ ಇಟ್ಟಿದ್ದಳು.
ದಿನಾ ಕಾಲೇಜಿಗೆ ಹೋಗಿ ಬಂದು ಸುಮ್ಮನೆ ಮಲಗುತ್ತಿದ್ದಳು. ಆದರೆ ಎರಡು ದಿನದಿಂದ ಕಾಲೇಜಿಗೆ ಹೋಗಲೇ ಇಲ್ಲ ಅವಳ ಕಾಯಿಲೆ ಉಲ್ಬಣಗೊಂಡಿತ್ತು. ಆಕೆಯ ತಾಯಿ ವಿಚಾರಿಸಿದಾಗಲು ಏನೂ ಹೇಳಿರಲಿಲ್ಲ. ಶನಿವಾರ ತೀವ್ರ ಅನಾರೋಗ್ಯಕ್ಕೊಳಗಾದ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಉಲ್ಬಣಗೊಂಡ ಕಾಯಿಲೆಗೆ ದೇಹ ಸ್ಪಂದಿಸದೆ ಸಂಜೆ ಯಕ್ಷಿತಾ ಮೃತಪಟ್ಟಿದ್ದಾಳೆ.
Click this button or press Ctrl+G to toggle between Kannada and English