ಭೂಗತ ಪಾತಕಿಗಳನ್ನು ಸೆರೆಹಿಡಿದ ತಂಡದ ಮುಖ್ಯಸ್ಥ ಉಡುಪಿ ಡಿವೈಎಸ್ಪಿ ಜಯಂತ ಶೆಟ್ಟಿ ಮತ್ತು ಕೊಲೆ ಆರೋಪಿಗಳನ್ನು ಸೆರೆ ಹಿಡಿದ ತಂಡದ ಮುಖ್ಯಸ್ಥ ಕಾರ್ಕಳ ಡಿವೈಎಸ್ಪಿ ಸಂತೋಷಕುಮಾರ್ ಅವರೂ ಸೇರಿದಂತೆ ತಂಡದ ಸದಸ್ಯರಿಗೆ ಶಂಕರ ಬಿದರಿಯವರು ಬಹುಮಾನ ವಿತರಿಸಿದರು.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಂತರಿಕ ಭದ್ರತೆ) ಹರ್ಷವರ್ಧನರಾಜು, ನೂತನ ಐಜಿಪಿ ಪ್ರತಾಪ ರೆಡ್ಡಿ, ಎಸ್ಪಿ ಡಾ|ರವಿಕುಮಾರ್, ಹೆಚ್ಚುವರಿ ಎಸ್ಪಿ ವೆಂಕಟೇಶಪ್ಪ ಉಪಸ್ಥಿತರಿದ್ದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕರಾವಳಿ ಪ್ರದೇಶವನ್ನು ಭೂಗತ ಚಟುವಟಿಕೆಗಳಿಂದ ಮುಕ್ತ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಭೂಗತ ಪಾತಕಿಗಳನ್ನು ಅಡಗಿಸಲು ಈಗಾಗಲೇ ಕ್ರಮ ಜರುಗಿಸಲಾಗುತ್ತಿದೆ ಎಂದರು.
ನಕ್ಸಲ್‌ಪೀಡಿತ ಎಲ್ಲಾ ಜಿಲ್ಲೆಗಳಿಗೆ ತಾನು ಭೇಟಿ ನೀಡಿ ನಕ್ಸಲ್ ನಿರೋಧಿ ಪಡೆಯನ್ನು ಬಲಪಡಿಸುವ ಅಗತ್ಯವಿದ್ದರೆ ಬಲಪಡಿಸುವ ಬಗ್ಗೆ ಯೋಚಿಸುವುದಾಗಿ ಹೇಳಿದರು.