ಹುಬ್ಬಳ್ಳಿ : ಸಿಎಂ ಕುಮಾರಸ್ವಾಮಿ ಬಾಡಿಗೆ ಮನೆ ಮಾರಾಟಕ್ಕೆ!

12:13 PM, Wednesday, August 1st, 2018
Share
1 Star2 Stars3 Stars4 Stars5 Stars
(4 rating, 1 votes)
Loading...

HD kumaraswamyಹುಬ್ಬಳ್ಳಿ : ಉತ್ತರ ಕರ್ನಾಟಕ‌ ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೋಸ್ಕರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಮನೆ ಮಾಡಿ ಅದ್ಧೂರಿ ಗೃಹ ಪ್ರವೇಶ ಮಾಡಿದ್ರು. ಆದರೆ ಈಗ ಅದೇ ಮನೆಯನ್ನು ಮನೆ ಮಾಲೀಕರು ಮಾರಾಟಕ್ಕಿಟ್ಟಿದ್ದಾರೆ. ಇದು ಕುಮಾರಸ್ವಾಮಿ ಅವರನ್ನು ಮುಜುಗರಕ್ಕೀಡು ಮಾಡಿದೆ.

ಸಿಎಂ ಆದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳಿಗೆ ಸಿಲುಕುತ್ತಲೇ ಇರುವ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ಹೊಸತರಲ್ಲಿ ಸಾಲ ಮನ್ನಾ ವಿಚಾರವಾಗಿ ಮುಜುಗರಕ್ಕೀಡಾಗಿದ್ದದರು. ಈಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿವಾದಕ್ಕೆ ಸಿಲುಕಿದ್ದಾರೆ. ಇದೆಲ್ಲದರ ನಡುವೆ ಜೆಡಿಎಸ್ ಮತ್ತು ಕೈ ನಾಯಕರ ನಡುವಿನ ಮುಸುಕಿನ ಗುದ್ದಾಟ ಬೇರೆ.

ಹೀಗಿರುವಾಗ ಕಾಕತಾಳೀಯವೆಂಬಂತೆ ಹುಬ್ಬಳ್ಳಿಯ ಭೈರಿದೇವರ ಕೊಪ್ಪದ ಮಾಯಕಾರ ಕಾಲೋನಿಯಲ್ಲಿರುವ ಕುಮಾರಸ್ವಾಮಿ ಅವರು ಬಾಡಿಗೆ ಪಡೆದಿದ್ದ ‘ಏಕದಂತ’ ಬಾಡಿಗೆ ನಿವಾಸವನ್ನು ಮನೆ ಮಾಲೀಕ ಮಾರಲು ನಿಂತಿದ್ದಾರೆ.

ಉತ್ತರ ಕರ್ನಾಟಕವನ್ನ ಅಭಿವೃದ್ಧಿ ಮಾಡ್ತೀನಿ, ಪಕ್ಷ ಸಂಘಟನೆ ಮಾಡ್ತೀನಿ ಅಂತ ಹೇಳಿಕೊಂಡಿದ್ದರು. ಆದ್ರೆ ಮೂರು ನಾಲ್ಕು ದಿನ ಮನೆಯಲ್ಲಿ ಉಳಿದುಕೊಂಡಿದ್ದು‌ ಬಿಟ್ಟರೆ ಇತ್ತ ಹೆಚ್ಚಾಗಿ ಬಂದಿರಲಿಲ್ಲ. ಮುಖ್ಯಮಂತ್ರಿಗಳು ವಾಸವಿದ್ದ ಬಾಡಿಗೆ ಮನೆಯನ್ನು ಮಾಲೀಕ ಸುರೇಶ ರಾಯರೆಡ್ಡಿ ಮಾರಾಟ ಮಾಡಲು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. 10 ಸಾವಿರ ಚದರಡಿಯ ನಾಲ್ಕು ಬೆಡ್ ರೂಮ್, ಪೂಜಾ ಕೋಣೆ, ಜಿಮ್ ಸೇರಿದಂತೆ ಸಕಲ ಸೌಕರ್ಯಗಳಿರುವ ಸುಸಜ್ಜಿತ ಮನೆ ಹಾಗೂ ಅವರ ಖಾಸಗಿ ಕಚೇರಿ ಈಗ ಮಾರಾಟಕ್ಕಿದೆ ಅಂತ ಜಾಹೀರಾತು ಪ್ರಕಟವಾಗಿದೆ.

ಕುಮಾರಸ್ವಾಮಿ ಅವರು ಕಳೆದ ನವೆಂಬರ್ 2016 ರಲ್ಲಿ ಹುಬ್ಬಳ್ಳಿಯ ಮಾಯಕಾರ ಕಾಲೋನಿಯ ನಿವಾಸದ ಅದ್ದೂರಿ‌ ಗೃಹ ಪ್ರವೇಶ ಮಾಡಿದ್ದರು. ಉತ್ತಮ ಕರ್ನಾಟಕ ಭಾಗದಲ್ಲಿ ಮನೆ ಮಾಡಿ. ಆ ಭಾಗದಲ್ಲಿ ಪಕ್ಷ ಸಂಘಟನೆ ಹಾಗೂ ಜನರಿಗೆ ಹತ್ತಿರವಾಗುವ ಯೋಜನೆಯಾಗಿತ್ತು. ಆದರೆ, ಇದೀಗ ಮನೆಯ ಮಾಲೀಕ ಮನೆಯನ್ನು ಮಾರಾಟಕ್ಕಿಟ್ಟಿದ್ದು ಕುಮಾರಸ್ವಾಮಿ ಬಳಕೆ ಮಾಡುತ್ತಿದ್ದ ಕಚೇರಿ ಸಹ ಮಾರಾಟಕ್ಕಿಡಲಾಗಿದೆ.

ನನ್ನ ವೈಯಕ್ತಿಕ ಕಾರಣದಿಂದಾಗಿ ಮನೆಯನ್ನು ಮಾರಾಟ ಮಾಡುತ್ತಿದ್ದೇನೆ. ಕುಮಾರಸ್ವಾಮಿ ಅವರಿಗೆ ಯಾವುದನ್ನು ತಿಳಿಸಿಲ್ಲ. ಆದ್ರೆ ಸದ್ಯಕ್ಕೆ ಅದೇ ಮನೆಯಲ್ಲಿ ಕುಮಾರಸ್ವಾಮಿ ಇರಲಿದ್ದಾರೆ. ನಾನು ಮಾರಾಟ ಮಾಡಿದ ಬಳಿಕ, ಅದು ಖರೀದಿಸಿದವರಿಗೆ ಸೇರುತ್ತೆ ಅಂತಾರೆ ಮನೆ ಮಾಲೀಕ ಸುರೇಶ ರಾಯರೆಡ್ಡಿ.

ಕುಮಾರಸ್ವಾಮಿ ಅವರಿಗೆ ಮನೆ ನೀಡಿದ್ದ ಸುರೇಶ ರಾಯರೆಡ್ಡಿ, ಬಾಡಿಗೆ ಪಡೆದಿಲ್ಲವಂತೆ. ಬಾಡಿಗೆಯ ಬದಲಾಗಿ ಮುಖ್ಯಮಂತ್ರಿ ಆದ್ಮೇಲೆ ರೈತರ ಸಾಲ ಮನ್ನಾ ಮಾಡ್ಬೇಕು ಅಂತ ಕಂಡೀಷನ್ ಹಾಕಿದ್ರಂತೆ. ಇವ್ರ ಕಂಡೀಷನ್ ಪ್ರಕಾರ ಸಿಎಂ ಅಲ್ಪ ಸ್ವಲ್ಪ ಸಾಲ ಮನ್ನಾ ಮಾಡಿದ್ದಾರೆ ಅಂದುಕೊಂಡ್ರೂ, ಇದು ಸುರೇಶ ರಾಯರೆಡ್ಡಿ ಅವರಿಗೆ ತೃಪ್ತಿ ತಂದಿರಲಿಕ್ಕಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English