ಮಂಗಳೂರು : ಮಂಗಳೂರಿನ ಬೋಂದೆಲ್ ನಲ್ಲಿರುವ ಸಂತ ಲಾರೆನ್ಸ್ ಚರ್ಚಿನ ವಾರ್ಷಿಕ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆಯನ್ನು ಮೌಂಟ್ ಕಾರ್ಮೆಲ್ ಶಾಲೆಯ ಆವರಣದಿಂದ ವಿಜೃಂಭಣೆಯಿಂದ ಚರ್ಚಿಗೆ ತರಲಾಯಿತು.
9 ದಿನಗಳ ನೊವೆನಾದ ಬಳಿಕ ದಿನಾಂಕ 10-08-2018 ರಂದು ನಡೆಯುವ ಈ ಹಬ್ಬದ ಪ್ರಯುಕ್ತ ಹೊರೆಕಾಣಿಕೆಯನ್ನು ಚರ್ಚಿನ ಭಕ್ತಾದಿಗಳಲ್ಲದೇ ಭಂದತಿ ಜುಮಾದಿ ಬಂಟರ ದೈವಸ್ಥಾನ ಪಚ್ಚನಾಡಿ, ಶ್ರೀದೇವಿ ಫ್ರೆಂಡ್ಸ್ ಪಚ್ಚನಾಡಿ, ಹಿಂದೂ ಜಾಗರಣ ವೇದಿಕೆ ಪಚ್ಚನಾಡಿ, ಹಿಂದೂ ಧಾರ್ಮಿಕ ಸೇವಾ ಸಮಿತಿ, ರಾಜಶ್ರೀ ಸೌಂಡ್ಸ್. ಮಹಾಲಸ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಸಾಂಗಾತಿ ವಾಮಂಜೂರು, ರಾಜಗುಳಿಗ ದೈವಸ್ಥಾನ, ಕೊರಗಜ್ಜ ಸೇವಾ ಸಮಿತಿ, ಗಂಧಕಾಡ್ ಗೆಳೆಯರು, ಜುಮ್ಮಾ ಮಸೀದಿ ಬೊಂದೇಲ್, ದೇರೆಬೈಲು ಚರ್ಚ್ ದೇರೆಬೈಲು ಹಾಗೂ ಇತರ ಸಂಘ ಸಂಸ್ಥೆಗಳಿಂದ ನೀಡಲಾಯಿತು.
ಮಹಾನಗರ ಪಾಲಿಕಾ ಮೇಯರ್ ಭಾಸ್ಕರ್ ಕೆ. ಅವರು ಧ್ವಜ ಹಾರಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಆಂಡ್ರ್ಯೂ ಡಿ’ಸೋಜ, ವಂ| ಲಿಯೋ ವೇಗಸ್, ವಂ| ಕ್ಲಿಫರ್ಡ್ ಪಿಂಟೋ, ಪಾಲನಾ ಸಮಿತಿಯ ಉಪಾಧ್ಯಕ್ಷ ಹೆನ್ಬರ್ಟ್ ಪಿಂಟೋ, ಕಾರ್ಯದರ್ಶಿ ಫ್ರಾನ್ಸಿಸ್ ವೇಗಸ್, ಸಂಚಾಲಕ ರುಡಾಲ್ಫ್ ಪಿಂಟೋ, ಕಾರ್ಯದರ್ಶಿ ವಿಲ್ಫ್ರೆಡ್ ಅಲ್ವಾರಿಸ್, ಕಾರ್ಯಕ್ರಮ ನಿರ್ವಾಹಕ ಲಾನ್ಸಿ ಡಿ’ಕುನ್ಹಾ, ಪ್ರಚಾರ ಸಮಿತಿಯ ಸ್ಟೇನಿ ಅಲ್ವಾರಿಸ್ ಹಾಗೂ ಮಾಧ್ಯಮ ಸಲಹೆಗಾರ ಇ. ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English