ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಚುನಾವಣೆ ಭಾನುವಾರ ವಾರ್ತಾ ಇಲಾಖೆಯ ಕಚೇರಿಯಲ್ಲಿ ನಡೆಯಿತು.
ಸಂಘದ 222 ಮಂದಿ ಮತದಾನ ಅರ್ಹತೆ ಇರುವ ಸದಸ್ಯರ ಪೈಕಿ 213 ಮಂದಿ ಮತ ಚಲಾಯಿಸಿ ಒಟ್ಟು ಶೇ. 95.94 ಮತ ಚಲಾವಣೆಯಾಯಿತು.
115 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಗುರುವಪ್ಪ ಬಾಳೆಪುಣಿ 98 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ನಾಲ್ಕು ಮಂದಿ ಸ್ಪರ್ಧಿಸಿದ್ದು, ಆ ಪೈಕಿ ಅನ್ಸಾರ್ ಇನೋಳಿ ಮತ್ತು ಶರತ್ ಶೆಟ್ಟಿ ಕಿನ್ನಿಗೋಳಿ ಚುನಾಯಿತರಾಗಿದ್ದಾರೆ.
ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾವುದೇ ಮತಗಳು ಅಸಿಂಧು ವಾಗಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಎರಡು ಮತಗಳು, ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಎರಡು ಹಾಗೂ ರಾಜ್ಯ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಐದು ಮತಗಳು ಅಸಿಂಧುವಾಗಿವೆ. ಈ ಸಾಲಿನ ಮತದಾನ ಪ್ರಮಾಣವು ಶೇ.95.94 ರಷ್ಟಾಗಿದೆ.
ಉಪಾಧ್ಯಕ್ಷರಾಗಿ ಶರತ್ ಶೆಟ್ಟಿ ಕಿನ್ನಿಗೋಳಿ(ಗ್ರಾಮೀಣ), ಮುಹಮ್ಮದ್ ಅನ್ಸಾರ್ ಇನೋಳಿ (ಗ್ರಾಮೀಣ) ಹಾಗೂ ದಯಾನಂದ ಕುಕ್ಕಾಜೆ(ಕೇಂದ್ರ) ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್ ಮೋಟುಕಾನ, ಪುಷ್ಪರಾಜ್ ಬಿ.ಎನ್., ಸುರೇಶ್ ಡಿ. ಪಳ್ಳಿ, ಭಾಸ್ಕರ್ ರೈ ಕಟ್ಟ, ಆತ್ಮಭೂಷಣ್, ಹಿಲರಿ ಕ್ರಾಸ್ತಾ, ರಾಜೇಶ್ ಶೆಟ್ಟಿ, ಹರೀಶ್ ಮಾಂಬಾಡಿ, ಗಂಗಾಧರ್ ಕಲ್ಲಪಳ್ಳಿ, ರವಿಚಂದ್ರ ಭಟ್, ಸತ್ಯವತಿ, ವಿಜಯ್, ಜೀವನ್ ಬಿ.ಎಸ್., ಲೋಕೇಶ್ ಪೆರ್ಲಂಪಾಡಿ, ರಾಜೇಶ್ ಕೆ. ಪೂಜಾರಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಆಯ್ಕೆಯಾದ ಶರತ್ ಶೆಟ್ಟಿ ಕಿನ್ನಿಗೋಳಿ-107, ಮುಹಮ್ಮದ್ ಅನ್ಸಾರ್ ಇನೋಳಿ-106 ಮತಗಳನ್ನು ಪಡೆದರೆ, ಇವರ ಪ್ರತಿಸ್ಪರ್ಧಿಗಳಾದ ಹರೀಶ್ ಬಂಟ್ವಾಳ-90, ವೆಂಕಟೇಶ್ ಬಂಟ್ವಾಳ 82 ಮತಗಳನ್ನು ಪಡೆದು ಪರಾಜಿತಗೊಂಡಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ವಾರ್ತಾಧಿಕಾರಿ ಖಾದರ್ ಶಾ ಕರ್ತವ್ಯ ನಿರ್ವಹಿಸಿದರು.
ಅವಿರೋಧ ಆಯ್ಕೆಯಾದ ಉಪಾಧ್ಯಕ್ಷ ದಯಾನಂದ ಕುಕ್ಕಾಜೆ (ಕೇಂದ್ರ), ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಅಡ್ಕಸ್ಥಳ, ಕಾರ್ಯದರ್ಶಿಗಳಾಗಿ ಎ.ಸಿದ್ದೀಕ್ ನೀರಾಜೆ (ಗ್ರಾಮೀಣ), ಜೀತೇಂದ್ರ ಕುಂದೇಶ್ವರ್ (ಕೇಂದ್ರ), ಭುವನೇಶ್ವರ್ ಜಿ. ಬೆಳ್ತಂಗಡಿ (ಗ್ರಾಮೀಣ), ಕೋಶಾಧಿಕಾರಿಯಾಗಿ ಆರ್.ಎ. ಲೋಹಾನಿ, ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಜಗನ್ನಾಥ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಲಾವಣೆಯಾದ ಮತಗಳು:
ಶ್ರೀನಿವಾಸ ನಾಯಕ್- 115
ಗುರುವಪ್ಪಬಾಳೆಪುಣಿ- 98
——
ಶರತ್ ಶೆಟ್ಟಿ ಕಿನ್ನಿಗೋಳಿ-107
ಮುಹಮ್ಮದ್ ಅನ್ಸಾರ್ ಇನೋಳಿ-106
ಹರೀಶ್ ಬಂಟ್ವಾಳ-90
ವೆಂಕಟೇಶ್ ಬಂಟ್ವಾಳ- 82
——
ಪುಷ್ಪರಾಜ್ ಬಿ.ಎನ್. – 158
ಹರೀಶ್ ಮೋಟುಕಾನ- 160
ಸತ್ಯವತಿ- 140
ಸುರೇಶ್ ಡಿ. ಪಳ್ಳಿ- 156
ಭಾಸ್ಕರ್ ರೈ ಕಟ್ಟ- 156
ಆತ್ಮಭೂಷಣ್- 154
ಹಿಲರಿ ಕ್ರಾಸ್ತಾ- 149
ರಾಜೇಶ್ ಶೆಟ್ಟಿ- 145
ಹರೀಶ್ ಮಾಂಬಾಡಿ-144
ಗಂಗಾಧರ್ ಕಲ್ಲಪಳ್ಳಿ- 144
ರವಿಚಂದ್ರ ಭಟ್- 141
ಲೋಕೇಶ್ ಪೆರ್ಲಂಪಾಡಿ- 136
ಜೀವನ್ ಬಿ.ಎಸ್.- 123
ರಾಜೇಶ್ ಕೆ. ಪೂಜಾರಿ- 121
ವಿಜಯ್- 116
ಮುಹಮ್ಮದ್ ಶರೀಫ್ ಸುಳ್ಯ- 115
ವಿದ್ಯಾಧರ ಶೆಟ್ಟಿ- 102
ಲಕ್ಷ್ಮೀನಾರಾಯಣ ರಾವ್- 97
ಆರಿಫ್ ಕಲ್ಕಟ್ಟ- 90
ಶಿವಪ್ರಸಾದ್- 75
Click this button or press Ctrl+G to toggle between Kannada and English