ಮಂಗಳೂರು : ಪರಿಸರವಾದಿಗಳು, ಮಂಗಳೂರು ಎನ್ ಇ ಸಿ ಎಫ್ ಪರಿಸರವಾದಿಗಳ ಸಂಘಟನೆ ಕಾರ್ಯಕರ್ತರಿಂದ ತೀವ್ರ ವಿರೋಧವಾದ ಹಿನ್ನಲೆಯಲ್ಲಿ ಲೇಡಿಹಿಲ್ ನ ರಸ್ತೆ ತಿರುವಿನಲ್ಲಿದ್ದ ಬೃಹತ್ ಮರವೊಂದನ್ನು ಬುಡ ಸಮೇತ ಬೇರೆಡೆಗೆ ಸ್ಥಳಾಂತರಿಸಿ ನೆಡಲಾಗಿದೆ.
ವಾಹನ ಸಂಚಾರಕ್ಕೆ ಅಡ್ಡಿಯಾಗುತಿದ್ದ ಹಿನ್ನೆಲೆಯಲ್ಲಿ ‘ಪೆಲ್ಟೋಫೋರಂ’ ಜಾತಿಯ ಆ ಮರವನ್ನು ಕಡಿಯಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿತ್ತು.
ಮಂಗಳೂರು ಮಾಹಾನಗರ ಪಾಲಿಕೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕ್ರೇನ್ ಮೂಲಕ ಸಮೀಪದಲ್ಲೇ ಇದ್ದ ಖಾಲಿ ಜಾಗಕ್ಕೆ ಸ್ಥಳಾತಂರಿಸಲಾಯಿತು.
Click this button or press Ctrl+G to toggle between Kannada and English