ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದಿದ್ದ ಇಂಜಿನಿಯರ್..ಶವವಾಗಿ ಪತ್ತೆ!

3:01 PM, Thursday, August 9th, 2018
Share
1 Star2 Stars3 Stars4 Stars5 Stars
(No Ratings Yet)
Loading...

engineerಚಿಕ್ಕಮಗಳೂರು: ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದಿದ್ದ ಇಂಜಿನಿಯರ್ವೋರ್ವರು 15 ದಿನಗಳ ಬಳಿಕ ಶವವಾಗಿ ಭದ್ರಾ ನದಿಯಲ್ಲಿ ಪತ್ತೆಯಾಗಿದ್ದಾರೆ.

ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆಯುವಾಗ ಕಾಲು ಜಾರಿ ಕಿರಣ್ ನದಿಗೆ ಬಿದ್ದಿದ್ದರು. ಇಂದು ಮಾಗುಂಡಿ ಸಮೀಪದಲ್ಲಿರುವ ಭದ್ರಾ ನದಿಯಲ್ಲಿ ಕಿರಣ್ ಮೃತದೇಹ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆ‌ ಸುರಿಯುತ್ತಿರುವ ಹಿನ್ನಲೆ ಭದ್ರಾ ನದಿಯಲ್ಲಿ ‌ಕಿರಣ್ ಮೃತ ದೇಹ ತೇಲಿ ಬಂದಿದೆ.

ಭದ್ರಾನದಿಯಲ್ಲಿ ಸೆಲ್ಫಿ ಸಾವು ಪ್ರಕರಣ… ಇನ್ನೂ ಪತ್ತೆಯಾಗದ ಪ್ರವಾಸಿಯ ದೇಹ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಂಬುತೀರ್ಥಕ್ಕೆ ಮಂಗಳೂರಿನಿಂದ ಕಳೆದ 15 ದಿನಗಳ ಹಿಂದೆ ತಮ್ಮ ಸ್ನೇಹಿತರೊಂದಿಗೆ ಕಿರಣ್ ಕೋಟ್ಯಾನ್ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿತ್ತು.

ಕಿರಣ್ ನೀರುಪಾಲಾಗಿದ್ದ ದಿನದಂದು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English