ಮಂಗಳೂರು : ಕಾಂಗ್ರೆಸ್ ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿ ಮೇಲೆ ನಗರದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ‘ಕ್ವಿಟ್ ಇಂಡಿಯಾ’ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಿತ್ತುಕೊಂ ಡ ಘಟನೆ ನಗರದ ಪುರಭವನದಲ್ಲಿ ಗುರುವಾರ ನಡೆದಿದೆ.
ಪುರಭವನದಲ್ಲಿ ನಡೆದ ಕ್ವಿಟ್ ಇಂಡಿಯಾ ಎಂಬ ಕಾರ್ಯಕ್ರಮದ ಅಂತ್ಯದಲ್ಲಿ ಕಾಂಗ್ರೆಸ್ ನಾಯಕರ ಮುಂದೆಯೇ ಹಲ್ಲೆ ನಡೆಸಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ಪುನೀತ್ ಶೆಟ್ಟಿ ಮೇಲೆ ಮಿಥುನ್ ರೈ ಮತ್ತು ಆತನ ಬೆಂಬಲಿಗರು ಏಕಾಏಕಿ ದಾಳಿ ನಡೆಸಿದ್ದಾರೆ. ಸುಮಾರು 15 ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ.
“ಈ ಹಿಂದೆಯು ಮಿಥುನ್ ರೈ ತಂಡ ನನ್ನ ಮೇಲೆ ಹಲ್ಲೆಗೆ ಯತ್ನಿಸಿತ್ತು. ಆದರೆ ಅವಕಾಶ ತಪ್ಪಿದ್ದರಿಂದ ಈ ದಿನ ಏಕಾಏಕಿ ಹಲ್ಲೆ ನಡೆಸಲಾಗಿದೆ. ಖುದ್ದಾಗಿ ಮಿಥುನ್ ರೈ ನನ್ನ ಬಳಿ ಬಂದು ‘ನೀನು ಯೂತ್ ಕಾಂಗ್ರೆಸ್ ಅಧ್ಯಕ್ಷ ಆಕಾಂಕ್ಷಿಯಾಗಿದ್ದು, ಅದರಿಂದ ಹಿಂದೆ ಸರಿಯದಿದ್ದಲ್ಲಿ ನಿನ್ನನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆಯೊಡ್ಡಿದ್ದಾನೆ” ಎಂದು ಪುನೀತ್ ಶೆಟ್ಟಿ ಆರೋಪಿಸಿದ್ದಾರೆ.
ಇದಲ್ಲದೆ ‘ಜಲೀಲ್ ಕರೋಪಾಡಿಯಂತೆ ಕೊಲ್ಲಲಾಗುವುದು. “ಜಲೀಲ್ ಕರೋಪಾಡಿನ ಕೊಲೆ ಯಾನೇ ಮನ್ಪಾದಿನಿ ಎಂದು ಮಿಥುನ್ ರೈ ಹೇಳುತ್ತಿದ್ದ. ಅದೇ ರೀತಿ ನಿನ್ನನ್ನು ಕೊಲ್ಲಿಸುತ್ತೇನೆ ಎಂದು ಮಿಥುನ್ ರೈ, ಆತನ ಜೊತೆಗಿರುವ ಅವಿನಾಶ್, ಚೇತನ್ ಮೊದಲಾದವರು ಹೇಳಿದ್ದಾರೆ” ಎಂದು ಪುನೀತ್ ಶೆಟ್ಟಿ ಹೇಳಿದ್ದಾರೆ .
ಮಿಥುನ್ ರೈ ಮೇಲೆ 3 ಗೂಂಡಾಗಿರಿ ಕೇಸ್ ಗಳಿವೆ. ಆದರೂ ಆತನಿಗೆ ಗನ್ ಮ್ಯಾನ್ ಕೊಟ್ಟಿದ್ದಾರೆ. ವೆಪನ್ ಕೊಟ್ಟಿದ್ದಾರೆ. ಆತ ನನಗೆ ಡಿಕೆ ಶಿವಕುಮಾರ್ ಇದ್ದಾರೆ ಎಂದು ಡಿಕೆ ಶಿವಕುಮಾರ್ ಹೆಸರನ್ನು ದುರುಪಯೋಗಪಡಿಸುತ್ತಿದ್ದಾನೆ. ಮಿಥುನ್ ರೈ 10 ದಿನಗಳ ಹಿಂದೆ ನನ್ನ ಮೇಲೆ ನಕಲಿ ದೂರು ನೀಡಿದ್ದ. ಕಾಂಗ್ರೆಸ್ ಕಾರ್ಯಕರ್ತನೇ ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ ನಡೆಸುವುದು ಮುಂದುವರಿದರೆ ಸಮಾಜದಲ್ಲಿ ಪಕ್ಷದ ಕಾರ್ಯಕ್ರಮ ನಡೆಸಲು ಕಷ್ಟ ಸಾಧ್ಯವಾಗಬಹುದು. ಯೂತ್ ಕಾಂಗ್ರೆಸ್ ಅಧ್ಯಕ್ಷ ಆಕಾಂಕ್ಷಿಯಾಗಿರುವುದು ಆತನಿಗೆ ಹಿಡಿಸುತ್ತಿಲ್ಲ. ಐವನ್ ಡಿಸೋಜರ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಅವನಿಗೆ ಅದು ಹಿಡಿಸುತ್ತಿಲ್ಲಎಂದು ಪುನೀತ್ ಶೆಟ್ಟಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English