ಬೆಳ್ತಂಗಡಿ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಕ್ರಿಬೆಟ್ಟುವಿನಲ್ಲಿ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತುಂಬೆ ರಾಮಲ್ ಕಟ್ಟೆ ನಿವಾಸಿ ಅಬ್ದುಲ್ ಜಬ್ಬಾರ್ ಮತ್ತು ಬಾಂಬಿಲ ನಿವಾಸಿ ಸಂಶೀರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 850 ಕೆ.ಜಿ. ಗೋಮಾಂಸ ಮತ್ತು ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೂಂಜಾಲಕಟ್ಟೆ ಕಡೆಯಿಂದ ಮಂಗಳೂರಿಗೆ ಪಿಕಪ್ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಾರೆಂದು ಬಂದ ಮಾಹಿತಿಯಂತೆ ಜಕ್ರಿಬೆಟ್ಟುವಿನಲ್ಲಿ ಪೊಲೀಸರು ಪಿಕಪ್ ವಾಹನವನ್ನು ತಡೆದಿದ್ದರು. ಈ ಸಂದರ್ಭ ಪಿಕಪ್ನಲ್ಲಿ 850 ಕೆ.ಜಿ ದನದ ಮಾಂಸ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English