ಚಿಕ್ಕಮಗಳೂರು: ತಾಲೂಕಿನ ಕೊಳಗಾಮೆ ಸಮೀಪ ಗುಡ್ಡ ಕುಸಿದಿದ್ದ ಕಾರಣ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ರಸ್ತೆಯಲ್ಲಿಯೇ ಕೆಲಕಾಲ ಕಾಯುವಂತಾಯಿತು.
ಕೆ.ಜೆ.ಜಾರ್ಜ್ ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಗರಿಗೆಖಾನ್ ಎಸ್ಟೇಟ್ನಲ್ಲಿ ವಾಸ್ತವ್ಯವಾಗಿದ್ದರು. ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಕೆಡಿಪಿ ಸಭೆಗೆ ಆಗಮಿಸುತ್ತಿದ್ದ ವೇಳೆ ಗುಡ್ಡ ಕುಸಿದಿದೆ. ಇದರಿಂದ ಸಚಿವರು ಅಲ್ಲೇ ಕೆಲಕಾಲ ಕಾಯುಂತಾಯಿತು. ನಂತರ ಸಚಿವರನ್ನು ಬೇರೆ ವಾಹನದಲ್ಲಿ ಕಚೇರಿಗೆ ಕಳುಹಿಸಲಾಯಿತು.
ಇನ್ನು ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ತುಂಗಾ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ನಿನ್ನೆ ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಶೃಂಗೇರಿಯ ಪ್ಯಾರಲಲ್ ರಸ್ತೆ, ಗಾಂಧಿ ಮೈದಾನ ಮುಳುಗಡೆಯಾಗಿದೆ.ಜತೆಗೆ ಸಂಧ್ಯಾವಂದನೆ ಮಂಟಪ ಹಾಗೂ ಕಪ್ಪೆ ಶಂಕರನಾರಾಯಣ ದೇವಾಲಯ ಕೂಡ ಮುಳುಗಡೆಯಾಗಿದೆ.
ಎರಡು ತಿಂಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರೋ ಮಳೆಗೆ ಜನ ಹೈರಾಣಾಗಿದ್ದು, ಮಳೆ ನಿಲ್ಲಲ್ಲೆಂದು ವರುಣನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.
Click this button or press Ctrl+G to toggle between Kannada and English