ಬೆಂಗಳೂರು: ಮೊಬೈಲ್ನಲ್ಲಿ ಮಾತನಾಡಿಕೊಂಡು ಬರುವಾಗ ಯುವತಿಯೋರ್ವಳು ಆಯತಪ್ಪಿ ಮೇಖ್ರಿ ವೃತ್ತದ ಮೇಲುಸೇತುವೆ ಬಳಿ ಬಿದ್ದಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಯುವತಿ ಅದೃಷ್ಟವಶಾತ್ ಪಾರಾಗಿದ್ದಾಳೆ. ಪುಣೆ ಮೂಲದ ಆಯೇಷಾ ಮೊಬೈಲ್ನಲ್ಲಿ ಮಾತನಾಡುತ್ತಾ ಕೆಳಗೆ ಬಿದ್ದ ಯುವತಿ. ಈಕೆ ಇಂದು ಬೆಳಗ್ಗೆ ಜಯಮಹಲ್ ರಸ್ತೆಯಿಂದ ಮೇಖ್ರಿ ಸರ್ಕಲ್ ಕಡೆಗೆ ನಡೆದುಕೊಂಡು ಬರುತ್ತಿದ್ದಳು. ಈ ವೇಳೆ ಮೊಬೈಲ್ನಲ್ಲಿ ಮಾತನಾಡುತ್ತ ಮೇಲುಸೇತುವೆ ಕೆಳಗಿಳಿಯುವಾಗ ಆಯತಪ್ಪಿ ಬಿದ್ದಿದ್ದಾರೆ.
10 ಅಡಿಯಿಂದ ಎತ್ತರದಿಂದ ಬಿದ್ದಿದ್ದರಿಂದ ಮುಖಕ್ಕೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆಗಾಗಿ ಎಂ.ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Click this button or press Ctrl+G to toggle between Kannada and English