ನವದೆಹಲಿ: ದೇಶದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ಗಳ ಪೈಕಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕೂಡ ಒಬ್ಬರು. 47 ರಾಹುಲ್ ಮದುವೆ ಸುತ್ತ ಈವರೆಗೆ ಸಾಕಷ್ಟು ಗಾಳಿಸುದ್ದಿಗಳು ಹರಿದಾಡಿವೆ. ಮದುವೆಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಸಲ ಪ್ರಶ್ನೆ ಉದ್ಭವವಾಗಿದ್ದು, ಅದರಿಂದ ಅವರು ತಪ್ಪಿಸಿಕೊಂಡಿದ್ದಾರೆ.
ಆದರೆ, ಇದೀಗ ಪತ್ರಕರ್ತನೊಬ್ಬ ಕೇಳಿರುವ ಪ್ರಶ್ನೆಗೆ ನನಗೆ ಈಗಾಗಲೇ ಮದುವೆಯಾಗಿದೆ ಎಂಬ ಉತ್ತರ ನೀಡಿದ್ದಾರೆ. ಆದರೆ ನಾನು ಮದುವೆಯಾಗಿದ್ದು ಯುವತಿಯೊಂದಿಗೆ ಅಲ್ಲ ಬದಲಿಗೆ ಪಕ್ಷದೊಂದಿಗೆ ಎಂದಿದ್ದಾರೆ.
ಎರಡು ದಿನಗಳ ಹೈದರಾಬಾದ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿಗೆ ಕೆಲ ಪತ್ರಕರ್ತರು ಈ ರೀತಿಯ ಪ್ರಶ್ನೆ ಮಾಡಿದಾಗ ಅವರು, ಅವರು ನಾನು ಈಗಾಗಲೇ ಪಕ್ಷದೊಂದಿಗೆ ಮದುವೆಯಾಗಿದ್ದೇನೆ ಎಂದಿದ್ದಾರೆ. ಇನ್ನು ಇದೇ ವೇಳೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ 230 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಿಲ್ಲ ಎಂಬ ಉತ್ತರ ನೀಡಿ, ಈಗಲೇ ಚುನಾವಣಾ ಭವಿಷ್ಯವನ್ನೂ ನುಡಿದಿದ್ದಾರೆ.
Click this button or press Ctrl+G to toggle between Kannada and English