ಸಹಸ್ರಲಿಂಗೇಶ್ವರದಲ್ಲಿ ನೇತ್ರಾವತಿ ಹಾಗು ಕುಮಾರಧಾರ ಸಂಗಮ..ಸಾವಿರಾರು ಭಕ್ತರು ಭಾಗಿ!

3:49 PM, Wednesday, August 15th, 2018
Share
1 Star2 Stars3 Stars4 Stars5 Stars
(No Ratings Yet)
Loading...

sahasra-lingeshwaraಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಒಂದೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇನ್ನೊಂದೆಡೆ ಕೆಲ ಅಪರೂಪದ ವಿದ್ಯಮಾನಗಳಿಗೂ ಸಾಕ್ಷಿಯಾಗುತ್ತಿದೆ. ಸರಿಸುಮಾರು 5 ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂದೆ ಸಂಗಮಗೊಂಡಿದೆ. ಸತತವಾಗಿ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗಿದ್ದರೂ, ಕುಮಾರಧಾರ ಮತ್ತು ನೇತ್ರಾವತಿ ನದಿಗಳು ಸಂಗಮ ಆಗಿರಲಿಲ್ಲ.

ಆದರೆ ರಾತ್ರಿ ನೀರಿನ ಒಳಹರಿವು ಹೆಚ್ಚಾಗುತ್ತಿದ್ದಂತೆ ನಿನ್ನೆ ರಾತ್ರಿ ನದಿಗಳ ಸಂಗಮವಾಗಿದ್ದು, ಎರಡೂ ನದಿಗಳ ನೀರು ದೇವಸ್ಥಾನದ ಒಳಗೆ ನುಗ್ಗಿ ಗರ್ಭಗುಡಿ ಪ್ರವೇಶ ಮಾಡುವ ಅಪರೂಪದ ಸನ್ನಿವೇಶಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. 24 ಗಂಟೆಗಳಲ್ಲಿ ಭಾರೀ ಮಳೆ, ಕರಾವಳಿಯಲ್ಲಿ ಹೈ ಅಲರ್ಟ್‌ ಇದೇ ಸಂದರ್ಭದಲ್ಲಿ ಸೇರಿದ್ದ ಅರ್ಚಕರು ಮತ್ತು ಭಕ್ತವೃಂದ ಗಂಗಾಪೂಜೆ ನಡೆಸಿದರು. ಈ ಹಿಂದೆ ಕೊನೆಯ ಬಾರಿಗೆ ಅಂದರೆ 2013ರ ಜುಲೈ 4ರಂದು ಹಾಗೂ ಅದಕ್ಕೂ ಹಿಂದೆ 2008ರ ಆಗಸ್ಟ್ 13ರಂದು ಉಭಯ ನದಿಗಳು ಸಂಗಮಗೊಂಡಿದ್ದವು. ನಿನ್ನೆ ಮುಂಜಾನೆಯಿಂದಲೇ ತಟದಲ್ಲಿ ನದಿಗಳ ಸಂಗಮಕ್ಕಾಗಿ ಭಕ್ತರು ಕಾದು ಕುಳಿತಿದ್ದರು. ಇದರಿಂದಾಗಿ ಉಪ್ಪಿನಂಗಡಿಯ ಹೆದ್ದಾರಿಯಲ್ಲಿ ಭಾರೀ ವಾಹನ ದಟ್ಟಣೆ ಆಗಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English