ವಿದೇಶಿಗರ ಬಳಿ ಅಧಿಕೃತ ಪತ್ರ ಇಲ್ಲದಿದ್ದರೆ ತಕ್ಷಣ ವಾಪಸ್ ಕಳುಹಿಸಲು ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ: ಡಾ. ಜಿ. ಪರಮೇಶ್ವರ್

4:10 PM, Wednesday, August 15th, 2018
Share
1 Star2 Stars3 Stars4 Stars5 Stars
(No Ratings Yet)
Loading...

parameshwaraತುಮಕೂರು: ಬಾಂಗ್ಲಾದೇಶ ಸೇರಿದಂತೆ ವಿದೇಶಿಗರ ಬಳಿ ಅಧಿಕೃತ ಪತ್ರ ಇಲ್ಲದಿದ್ದರೆ ತಕ್ಷಣ ವಾಪಸ್ ಕಳುಹಿಸಲು ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವೀಸಾ ಅವಧಿ ಪೂರ್ಣಗೊಂಡಿದ್ದರೂ ಇಲ್ಲಿಯೇ ಉಳಿದುಕೊಂಡು ಡ್ರಗ್ಸ್ ದಂಧೆ ಮಾಡುತ್ತಿದ್ದ 107 ಜನ ಆಫ್ರಿಕಾ ಪ್ರಜೆಗಳನ್ನು ವಾಪಸ್ ಕಳುಹಿಸುವ ಕ್ರಮಕ್ಕೆ ಮುಂದಾಗಿದ್ದೇವೆ. ಇಡೀ ರಾಜ್ಯದಲ್ಲಿ ಸೂಕ್ಷ್ಮವಾಗಿ ಗಮನಿಸಿ ಅಂತಹವರನ್ನು ವಾಪಸ್ ಕಳುಹಿಸಲಾಗುವುದು ಎಂದರು.

ಸೈಬರ್ ಕ್ರೈಂ ಅನ್ನು ತಡೆಗಟ್ಟಲು ಪ್ರತ್ಯೇಕ ಸೈಬರ್ ಸ್ಟೇಷನ್ ತೆರೆಯಲಾಗುತ್ತಿದೆ. ಸಿಬ್ಬಂದಿಗೆ ವಿಶೇಷ ತರಬೇತಿ ನೀಡುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಹರಿಸಲು ಸೈಬರ್ ಇಲಾಖೆಯನ್ನು ಪ್ರಾರಂಭಿಸುತ್ತಿದ್ದೇವೆ. ಇನ್ಫೋಸಿಸ್ನವರು ಸೈಬರ್ ಸೆಲ್ ಮಾಡಲು ಸಹಕರಿಸುತ್ತಿದ್ದಾರೆ ಎಂದರು.

ಮಹದಾಯಿ ನದಿ ನೀರು ಹಂಚಿಕೆ ಕುರಿತು ಟ್ರಿಬ್ಯುನಲ್ ತೀರ್ಪು ಸಮಾಧಾನ ತಂದಿದೆ. 34 ಟಿಎಂಸಿ ನೀರು ಕೇಳಿದ್ದೆವು. ಇದೀಗ 13.5 ಟಿಂಎಸಿ ಲಭಿಸುತ್ತಿದೆ. ಈ ಕುರಿತು ಮೇಲ್ಮನವಿ ಸಲ್ಲಿಸಬೇಕೋ ಬೇಡವೋ ಸರ್ಕಾರದಲ್ಲಿ ಚರ್ಚೆ ಮಾಡಲಾಗುವುದು. ಆ ಭಾಗದಲ್ಲಿ ಕುಡಿಯುವ ನೀರಿನ ಬವಣೆ ತಪ್ಪಲಿದೆ. ಆದ್ರೆ ರೈತರ ಬೇಡಿಕೆಯಂತೆ ಇನ್ನೂ ಕನಿಷ್ಟ 10 ಟಿಎಂಸಿ ಸಿಕ್ಕಿದ್ದರೆ ಅನುಕೂಲ ಆಗುತ್ತಿತ್ತು.

ಗೋವಾ ರಾಜ್ಯ ಕೂಡ 122 ಟಿಎಂಸಿ ನೀರು ಕೇಳಿತ್ತು, ಆದ್ರೆ ಸಿಕ್ಕಿರೋದು 24 ಟಿಎಂಸಿ ಮಾತ್ರ. ಮೇಲ್ಮನವಿ ಸಲ್ಲಿಸಬೇಕೋ ಎಂಬುದು ಅವರಿಗೆ ಬಿಟ್ಟ ತೀರ್ಮಾನವಾಗಿದೆ. ಪ್ರಧಾನ ಮಂತ್ರಿ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದೇವೆ. ಆದ್ರೆ ಅವರು ದೂರ ಉಳಿದರು. ಟ್ರಿಬ್ಯುನಲ್ಗೆ ಬಿಟ್ಟು ರಾಜ್ಯಕ್ಕೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ.

ರಾಜ್ಯದ ನೆಲಜಲದ ವಿಷಯ ಬಂದಾಗ ಪಕ್ಷಬೇಧ ಮರೆತು ಹೋರಾಟ ಮಾಡಬೇಕಿದೆ. ಯಡಿಯೂರಪ್ಪನವರು ಇರಬಹುದು ಬೇರೆ ಯಾರೇ ನಾಯಕರಿದ್ದರೂ ಅದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ರಾಜ್ಯದ ಜನತೆಗೆ ಮೋಸ ಮಾಡಿದಂತಾಗುತ್ತದೆ.

ಟ್ರಿಬ್ಯುನಲ್ನಲ್ಲಿ ಬೇಕಾದ ಅಂಕಿ ಅಂಶಗಳನ್ನು 34 ಟಿಎಂಸಿ ನೀರು ಕೊಡುವ ಕುರಿತು ವಾದ ಮಂಡಿಸುವಲ್ಲಿ ರಾಜ್ಯದ ವಕೀಲರು ಸಫಲರಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪದ ಕುರಿತು ಯಾವುದೇ ದೂರು ಬಂದಿಲ್ಲ. ಸಚಿವ ರೇವಣ್ಣ ಕಿರುಕುಳ ನೀಡುತ್ತಿದ್ದರೆ ಅವರೊಂದಿಗೆ ಮಾತನಾಡುತ್ತೇನೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English