ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ..!

10:09 AM, Thursday, August 16th, 2018
Share
1 Star2 Stars3 Stars4 Stars5 Stars
(No Ratings Yet)
Loading...

vatal-vajpayeeನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಕಳೆದ 24 ಗಂಟೆಗಳಲ್ಲಿ ಅವರ ಆರೋಗ್ಯ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ಏಮ್ಸ್ ಆಸ್ಪತ್ರೆ ಮೂಲಗಳು ತಿಳಿಸಿವೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ, ಕಳೆದ ಜೂನ್ 11ರಂದು ಏಮ್ಸ್ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಕಳೆದ 24 ಗಂಟೆಗಳಿಂದ ಅವರ ಆರೋಗ್ಯದಲ್ಲಿ ಭಾರಿ ಏರುಪೇರು ಕಂಡು ಬಂದಿದ್ದು, ಲೈಫ್ ಸಪೋರ್ಟ್ ಮೇಲೆ ಇಡಲಾಗಿದೆ.

ಇನ್ನು ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದ್ದಂತೆ ಅನೇಕ ಕೇಂದ್ರ ಸಚಿವರು ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ. ಪ್ರಮುಖವಾಗಿ ಕೇಂದ್ರ ಸಚಿವರಾದ ಅಶ್ವಿನ್ ಕುಮಾರ್ ಔದರಿ, ಜಿತೇಂದ್ರ ಸಿಂಗ್, ಹರ್ಷವರ್ಧನ್, ಸುರೇಶ್ ಪ್ರಭು, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ, ಪೀಯೂಶ್‌ ಗೋಯೆಲ್, ಸ್ಮೃತಿ ಇರಾನಿ ಏಮ್ಸ್‌ಗೆ ತೆರಳಿ ವಾಜಪೇಯಿ ಅವರ ಆರೋಗ್ಯ ವಿಚಾರಿಸಿದ್ದಾರೆ.

93 ವರ್ಷದ ಹಿರಿಯ ನಾಯಕ ವಾಜಪೇಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಒಂದು ಕಿಡ್ನಿ ಮಾತ್ರ ಕಾರ್ಯವೆಸಗುತ್ತಿದೆ. 2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ಅವರ ಸ್ಮರಣ ಶಕ್ತಿ, ಗುರುತು ಹಿಡಿಯುವ ಶಕ್ತಿ ಕುಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English