ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂಸದ ಶಿವಕುಮಾರ ಉದಾಸಿ ತೀವೃ ಸಂತಾಪ

12:08 PM, Friday, August 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

shivkumarಗದಗ: 1924ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ರವರ ಮಗನಾಗಿ ಮದ್ಯಪ್ರದೇಶದ ಗ್ವಾಲಿಯಾರ ಹತ್ತಿರದ ಶಿಂದೇಕೀ ಚವ್ಹಾಣ ಎಂಬ ಗ್ರಾಮದಲ್ಲಿ ಜನಿಸಿದರು. 1939ರಲ್ಲಿರಾಷ್ಟ್ರೀಯ ಸ್ವಯಂ ಸಂಘಕ್ಕೆ ಸೇರ್ಪಡೆಯಾದರು. 1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ(ಬ್ರಿಟಿಷರೇ ಭಾರತ ಬಿಟ್ಟು ತೊಲಗಿ)ಯಲ್ಲಿ ಭಾಗಿಯಾದರು. ಸುಮಾರು 50 ವರ್ಷಗಳ ಸ್ವಚ್ಛ ರಾಜಕೀಯ ಕನಸು ಕಂಡ ಅಜಾತ ಶತೃ ಅದ್ಭುತ ವಾಗ್ಮೀ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರು ಬಹುದಿನದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಇಂದು ನಿಧನರಾಗಿದ್ದು.

ಅತೀವ ದು:ಖದ ವಿಷಯವೆಂದು ಹಾವೇರಿ ಲೋಕಸಭಾ ಸಂಸದರಾದ ಶಿವಕುಮಾರ ಉದಾಸಿ ರವರು ತೀವೃ ಸಂತಾಪ ವ್ಯಕ್ತ ಪಡಿಸಿದ್ದಾರೆ. 13 ಪಕ್ಷಗಳನ್ನು ಒಟ್ಟುಗೂಡಿಸುವ ಮೂಲಕ ಸರ್ಕಾರ ರಚಿಸಿದ ಕೀರ್ತಿ ಮಾನ್ಯ ವಾಜಪೇಯಿರವರಿಗೆ ಸಲ್ಲುತ್ತದೆ. ಯಾವದೇ ಕಳಂಕವಿಲ್ಲದ ಅವರ ವಿರುದ್ದ ಅವಿಶ್ವಾಸ ಮಂಡನೆಯಾದಾಗ ಯಾವುದೇ ಮುಲಾಜಿಯಿಲ್ಲದೆ ರಾಜೀನಾಮೆ ಸಲ್ಲಿಸುವ ಮೂಲಕ ಈ ದೇಶದ ರಾಜಕೀಯಕ್ಕೆ ಒಂದು ಹೊಸ ದಿಕ್ಸೂಚಿಯನ್ನು ತೋರಿದ ಬಿಜೆಪಿ ನೇತಾರ ಅಭಿವೃದ್ಧಿ ಹರಿಕಾರ, ಶುದ್ಧ ಮನಸ್ಸಿನ ಕವಿ ಭಾರತ ದೇಶದ ೩ ಭಾರಿ ಹೆಮ್ಮೆಯ ಪ್ರಧಾನ ಮಂತ್ರಿಗಳಾಗಿ ಸೇವೆಸಲ್ಲಿಸಿದ ಶ್ರೀ ಅಟಲ್ ಬಿಹಾರಿ ವಾಜಪೇಯಿರವರು ಇಂದು ನಿಧನರಾಗಿದ್ದು. ಅತೀವ ದು:ಖದ ಸಂಗತಿ.

ಇವರು 1951 ರಲ್ಲಿ ಭಾರತೀಯ ಜನಸಂಘದ ಸ್ಥಾಪಕರಾಗಿ 1953 ರಲ್ಲಿ ಭಾರತೀಯ ಜನ ಸಂಘದ ಮೂಲಕ ಶ್ಯಾಮ್ ಸುಂದರ ಮುಖರ್ಜಿರವರ ನೇತೃತ್ವದಲ್ಲಿ ಭಾರತೀಯ ಜನ ಸಂಘವನ್ನು ದೇಶಾದ್ಯಂತ ವಿಸ್ತರಿಸಿ, 1957 ರಲ್ಲಿ ಮೊದಲ ಭಾರಿಗೆ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ತದನಂತರ 10 ಭಾರಿ ಲೋಕಸಭಾ 2 ಭಾರಿ ರಾಜ್ಯಸಭಾ ಸದಸ್ಯರಾಗಿ ಈ ಭಾರತದ ದೇಶದ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 1977 ರಲ್ಲಿ ಜನತಾ ಪಕ್ಷದ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಸೇವೆಸಲ್ಲಿಸಿದರು.

1980ರಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸ್ಥಾಪನೆ ಮಾಡಿದರು. 1992 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದರು. 1993 ರಲ್ಲಿ ಕಾನ್ಪುರ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪಡೆದರು. 1993 ರಲ್ಲಿ 13 ದಿನದ ಭಾರತದ ದೇಶದ ಪ್ರಧಾನಿಯಾದರು. 1998 ರಿಂದ 2004 ರವರೆಗೆ ಮತ್ತೆ ಪ್ರಧಾನ ಮಂತ್ರಿಯಾದರು. ಇವರು ಪ್ರಧಾನಮಂತ್ರಿಯಾದ ಅವಧಿಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ರಾಷ್ಟ್ರೀಯ ಹೆದ್ದಾರಿಗಳನ್ನು ಚತುಷ್ಪತ್ ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತಿಸಿದರು.

ಮಾನ್ಯ ವಾಜಪೇಯಿ ರವರು ಪ್ರಧಾನಿಯಾದ ಸಂದರ್ಭದಲ್ಲಿ ಪೋಕ್ರಾನ್ ಅಣ್ವಸ್ತ್ರ ಪರೀಕ್ಷೆ ಮಾಡುವ ಮೂಲಕ ಭಾರತದ ಅಣುಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ವಾಜಪೇಯಿ ರವರದು, ಇದೇ ಸಂಧರ್ಭದಲ್ಲಿ ಜೈ ಜವಾನ್ ಜೈ ಕಿಸಾನ್ ದೊಂದಿಗೆ ಜೈ ವಿಜ್ಞಾನ ಘೋಷಣೆಯನ್ನು ಸೇರಿಸುವದರ ಮೂಲಕ ವಿಜ್ಞಾನಕ್ಕೆ ಅವರು ಕೊಟ್ಟ ಮನ್ನಣೆ ಅವೀಸ್ಮರಣೆಯ ವಾಜಪೇಯಿಯವರು ಕಾರ್ಗಿಲ್ ಯುದ್ಧದಲ್ಲಿ ವೀರಯೋಧರಿಗೆ ಆತ್ಮಸ್ತೈರ್ಯ ತುಂಬು ಮೂಲಕ ಪಾಕಿಸ್ಥಾನವನ್ನು ಕಾರ್ಗಿಲ್ ಯುದ್ಧದಲ್ಲಿ ಬಗ್ಗು ಬಡೆದರು. ನದಿ ಜೋಡಣೆ ಕನಸು ಕಂಡ ಭಾರತದ ಸರ್ವಾಂಗೀಣ ವಿಕಾಸದ ಕನಸುಗಾರಾಗಿದ್ದರು.

ಇವರ ಸೇವೆ ಭಾರತ ದೇಶಕ್ಕೆ ಅವೀಸ್ಮರಣಿಯಾಗಿದೆ. ಇಂತಹ ಸ್ವಚ್ಚಮನಸ್ಸಿನ ವ್ಯಕ್ತಿ ಮರೆಯಲಾಗದ ಮಾಣಿಕ್ಯ ಶ್ರೀ ಅಟಲ್ ಬಿಹಾರಿ ವಾಜೇಪೇಯಿವರ ನಿಧನಕ್ಕೆ ಹಾವೇರಿ ಲೋಕಸಭೆಯ ಸದಸ್ಯರಾದ ಶಿವಕುಮಾರ ಉದಾಸಿ ತೀವೃ ಸಂತಾಪ ವ್ಯಕ್ತ ಪಡಿಸಿ ಅಂತಿಮಯಾತ್ರೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಪ್ರಯಾಣಿಸಿದರು ಎಂದು ಸಂಸದರ ಕಾರ್ಯಾಲಯದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English