ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್​ಖಾನ್​ ಪ್ರಮಾಣ ಸ್ವೀಕಾರ..!

12:51 PM, Saturday, August 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

imran-khanಇಸ್ಲಾಮಾಬಾದ್: ಪಿಟಿಐ ಪಕ್ಷದ ನೇತಾರ, ಮಾಜಿ ಕ್ರಿಕೆಟರ್ ಇಮ್ರಾನ್ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ಪಾಕಿಸ್ತಾನದ ಅಧ್ಯಕ್ಷ ಮ್ಯಾಮ್ನೂನ್ ಹುಸೇನ್ ಅವರು ಇಮ್ರಾನ್ ಖಾನ್ ಪ್ರಮಾಣವಚನ ಬೋಧಿಸಿದರು. 1992ರ ವಿಶ್ವಕಪ್ ಎತ್ತಿಹಿಡಿದಿದ್ದ ಇಮ್ರಾನ್ ಖಾನ್ ಇದೀಗ ಪಾಕ್ನ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ.

ಶುಕ್ರವಾರ ನಾಷನಲ್ ಅಸೆಂಬ್ಲಿಯಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಇಮ್ರಾನ್ ಖಾನ್, ತಮ್ಮ ಪ್ರತಿಸ್ಪರ್ಧಿ ಪಿಎಂಎಲ್ ನವಾಜ್( ಎನ್) ಶಹಬಾಜ್ ಶರೀಫ್ ಅವರನ್ನ 80 ಮತಗಳಿಂದ ಸೋಲಿಸಿ ಪ್ರಧಾನಿ ಪಟ್ಟಕ್ಕೆ ಏರಿದ್ದಾರೆ.

imran-khan-2ನಿನ್ನೆ ಪಾಕ್ ನಾಷನಲ್ ಅಸೆಂಬ್ಲಿಯಲ್ಲಿ ನಡೆದ ಚುನಾವಣೆಯಲ್ಲಿ ಖಾನ್ 176 ಮತಗಳನ್ನ ಪಡೆದರೆ ನವಾಜ್ಗೆ ಕೇವಲ 96 ಮತಗಳು ಬಂದವು. ಪ್ರಮಾಣವಚನ ಸಮಾರಂಭದ ಬಳಿಕ ಮಾತನಾಡಿದ ಅವರು, ನಾನು ಯಾವುದೇ ಸರ್ವಾಧಿಕಾರಿಯ ತೋಳನ್ನ ಏರಿಲ್ಲ. ಈ ಸ್ಥಾನಕ್ಕೆ ಬಂದಿರುವುದು 22 ವರ್ಷಗಳ ನನ್ನ ಹೋರಾಟದ ಬಲದಿಂದ ಎಂದು ಸ್ಪಷ್ಟಪಡಿಸಿದರು.

ಪ್ರಮಾಣ ವಚನ ಸಮಾರಂಭದಲ್ಲಿ ಇಮ್ರಾನ್ ಪತ್ನಿ ಬುಶ್ರಾ ಮನೇಕಾ ಹಾಜರಿದ್ದರು. ಈ ವೇಳೆ ಅವರ ಪಕ್ಷದ ಅಪಾರ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English