ಪೊಲೀಸ್ ಸಿಬ್ಬಂದಿವೋರ್ವರ ಮೊಬೈಲ್ ಮತ್ತು ನಗದು ದೋಚಿದ ಮೂವರ ಕಳ್ಳರ ಬಂಧನ..!

10:31 AM, Monday, August 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

arrestedಮಂಗಳೂರು: ಮಂಗಳೂರಿನ ನೆಹರು ಮೈದಾನದ ಬಳಿ ಪೊಲೀಸ್ ಸಿಬ್ಬಂದಿವೋರ್ವರ ಮೊಬೈಲ್ ಮತ್ತು ನಗದು ದೋಚಿದ ಮೂವರು ಕಳ್ಳರನ್ನು ಪಾಂಡೇಶ್ವರ ಪೊಲೀಸರು ಮತ್ತು ದಕ್ಷಿಣ ರೌಡಿ ನಿಗ್ರಹ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ನೆಹರು ಮೈದಾನದ ಸಮೀಪ ಸಶಸ್ತ್ರ ಮೀಸಲು ಪಡೆ ಪೊಲೀಸ್ ಕಾನ್ಸ್ಟೇಬಲ್ ಶ್ರೀನಿವಾಸ್ ಅವರ ಮೊಬೈಲ್ ಹಾಗೂ ನಗದನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದರು.

ಚಿಕ್ಕಮಗಳೂರಿನ ಯತೀಶ್ ಎಂ.ಎಸ್. ಯಾನೆ ಯತಿ (22) ಮಹಮ್ಮದ್ ಅಶ್ರಫ್ ಯಾನೆ ಅಜ್ಜು (23) ಮತ್ತು ಬಂಟ್ವಾಳ ತಾಲೂಕು ಸರಪಾಡಿ ಅಜಿಲಮೊಗರಿನ ಮುಹಮ್ಮದ್ ಅಶ್ರಫ್ ಯಾನೆ ನಿಜಾಮ್ (21) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಮೂರು ತಿಂಗಳ ಹಿಂದೆ ಕಾನ್ಸ್ಟೇಬಲ್ ಶ್ರೀನಿವಾಸ ಅವರು ನಗರದ ನೆಹರೂ ಮೈದಾನದ ಒಳಭಾಗದಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ ಮೂವರು ಅಪರಿಚಿತರು ಏಕಾಏಕಿ ಅಡ್ಡಗಟ್ಟಿ ಅವರ ಬಳಿಯಿದ್ದ ಮೊಬೈಲ್ ಫೋನ್, ಪರ್ಸ್ನಲ್ಲಿದ್ದ 450 ರೂ.ಗಳನ್ನು ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಸಿ, ತನಿಖೆ ನಡೆಸುತ್ತಿದ್ದ ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ.

ಯತೀಶ್ ಎಂ.ಎಸ್ ಕುಖ್ಯಾತ ಕಳ್ಳನಾಗಿದ್ದು, ಆತ ತನ್ನ ಸಹಚರನಾದ ರವಿ ಯಾನೆ ಶಂಕರಲಿಂಗೇಗೌಡನ ಜತೆ ಸೇರಿಕೊಂಡು ಬೆಂಗಳೂರು ನಗರ ಮತ್ತು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಪಾಂಡೇಶ್ವರ ಇನ್ಸ್ಪೆಕ್ಟರ್ ಸಾಯಿನಾಥ ಎಂ ರಾಣೆ, ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಹಾಗೂ ಸಿಬ್ಬಂದಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English