ಮಾಣಿಲ ಶ್ರೀಧಾಮದಲ್ಲಿ ಆಗಸ್ಟ್ 24 ಶುಕ್ರವಾರ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

1:16 PM, Monday, August 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

Manila Sridhamaಬಂಟ್ವಾಳ: ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮದಲ್ಲಿ ನಡೆಯುತ್ತಿರುವ 48 ದಿವಸಗಳ ಶ್ರೀ ಲಕ್ಷ್ಮಿ ಪೂಜೆಯ 43 ನೇ ದಿನವಾದ ಭಾನುವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿದಂತಹ ಶ್ರೀ ಕೆಯ್ರೂರು ಶ್ರೀ ನಾರಾಯಣ ಭಟ್ ರವರು ಸಂತೋಷವನ್ನು ವ್ಯಕ್ತಪಡಿಸಬಹುದು.  ಆನಂದವನ್ನು ವ್ಯಕ್ತಪಡಿಸಲಾಗದು. ಆದರೆ  ಶ್ರೀ ಧಾಮದಲ್ಲಿ ಸಂತೋಷ ಮತ್ತು ಆನಂದವನ್ನು ಒಟ್ಟಿಗೆ ಕಳೆಯಲಾಗುತ್ತಿದೆ ಎಂದರು. ಹಿಂದೂ ಸಮಾಜದಲ್ಲಿ ಶಕ್ತಿ ತುಂಬುವ ಕೆಲಸವನ್ನು ಮಾಣಿಲ ಶ್ರೀ ಗಳಂತಹ ಪೂಜರುಗಳಿಂದ ಆಗುತ್ತಿದೆ. ಕೆಲವು ದಿನಗಳ ಹಿಂದೆ ನಿಧನರಾದ ಭಾರತದ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯೀ ಅವರ ಸಾಧನೆ ಅವರು ಪ್ರಧಾನಿ ಯಾಗಿದ್ದಾಗ ಅದರ ಆಡಳಿತದ ಬಗ್ಗೆ ಹೇಳಿದರು.ಸಾಮೂಹಿಕವಾಗಿ ಎಲ್ಲರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಮೂಡಲಾಯಿತು.

ಇನ್ನೋರ್ವ ಅತಿಥಿಯಾದ ಡಾ! ಕೃಷ್ಣ ಮೋಹನ್ ಬಜಕೋಡ್ಲು , ಪೆರ್ಲ ಇವರು ತಮ್ಮ ಮತ್ತು ಕ್ಷೇತ್ರದ ನಡುವಿನ ನಂಟು 7 ವರ್ಷಗಳ ಹಿಂದಿನದು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಕ್ಷೇತ್ರದ ಟ್ರಸ್ಟಿಯಾದ ಮೆಚ್ಚೆಂದ್ರ ಸಾಲಿಯಾನ್ ರವರು ಸಮಾಜಕ್ಕಾಗಿ ಜನರಿಗಾಗಿ ಸರ್ವರನ್ನು ಪ್ರೀತಿಸುವ ಜನರ ಒಳಿತಿಗಾಗಲಿ ಬೇಡುವ ಸ್ವಾಮೀಜಿ ಎಂದರೆ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಎಂದರು.

Manila Sridhamaಭಕ್ತರಿಗೆ ಆಶೀರ್ವಾದವನ್ನು ನೀಡುತ್ತಾ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಕ್ಷೇತ್ರದಲ್ಲಿ ನೆಡೆಯಿತ್ತಿರುವ ೪೮ ದಿವಸಗಳ ಲಕ್ಷ್ಮೀಪೂಜೆಗೆ ಮೂವರು ಕಮಲಮ್ಮನವರು. ಶಂಕರಾಚಾರ್ಯರು ಮತ್ತು ನಿತ್ಯಾನಂದ ಸ್ವಾಮಿ.

ಎಲ್ಲ ಹಿಂದೂ ದೇವಾಲಯ ಮಠ ಮಂದಿರಗಳೆಲ್ಲ ಇಂದಿನ ಪ್ರಕೃತಿಯ ಶಾಂತಿಯನ್ನು ಕಾಣಲು ನಾವೆಲ್ಲರೂ ಪ್ರಾರ್ಥನೆ ಮಾಡಬೇಕಾಗಿದೆ. ಎಲ್ಲ ಜೀವರಾಶಿಗಳನ್ನು ಪ್ರೀತಿಸಬೇಕು. ಎಲ್ಲ ಜನರಲ್ಲೂ ದೇವರನ್ನು ಕಾಣಬೇಕು. ಸಾತ್ವಿಕತೆಯನ್ನು ಮೈಗೂಡಿಸಿಕೊಳ್ಳಬೇಕು.ಋಣಾತ್ಮಕವಾದಂತಹ ದೇವಾಲಯವನ್ನು ಕಡಿಮೆಮಾಡಿ ಧನಾತ್ಮಕ ಭಾವನೆಯನ್ನು ಬೆಳಸಿಕೊಳ್ಳಬೇಕು. ಬಾಲ ಭೋಜನದ ಉದ್ದೇಶವೇ ಸಹಭೋಜನ, ಸಹಚಿಂತನೀಯವಾಗಿದೆ.  ತಂದೆ ತಾಯಿಗೆ ಸಂಸತ್ತು ಎಂದರೆ ಅವರ ಮಕ್ಕಳೇ ಆಗಿರುತ್ತಾರೆ. ಒಬ್ಬ ತಾಯಿಗೆ ಕಾಲುಂಗುರ, ಬೈತಾಳೆ , ಕೈಬಳೆ, ಮೂಗುತಿ , ಹಣೆಗೆ ಕುಂಕುಮ ಇವ್ರೇ ಪಂಚಸೂತ್ರಗಳಾಗಿವೆ ಎಂದು ಅರ್ಷಾವಚನದಲ್ಲಿ ಹೇಳಿದರು.

ಮಹಿಳಾ ಸೇವಾ ಪ್ರತಿಷ್ಠಾನದ ಟ್ರಸ್ಟಿ ಚಂದ್ರಶೇಖರ ತುಂಬೆ ಮತ್ತು ಶ್ರೀ ದೇವಿ ಶಾಮಿಯಾನದ ಮಾಲಕರು ಬಿಲ್ಲವ ಸಂಘದ ಅಧ್ಯಕ್ಶರಾದ ಶ್ರೀ ಚಂದ್ರಹಾಸ ಉಪಸ್ಥಿತರಿದ್ದರು.

ಆಗಸ್ಟ್ 24  ಶುಕ್ರವಾರ 48 ದಿವಸಗಳ ಶ್ರೀ ಲಕ್ಷ್ಮಿ ಪೂಜೆಯ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಯೊಂದಿಗೆ ಸಮಾಪನ ಗೊಳ್ಳಲಿದೆ. ಅಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.

ಆಗಸ್ಟ್ 25 ರಂದು ಪ್ರಾತಃ ಕಾಲ ಸಿಯಾಳಾಭಿಷೇಕ ಹಾಗೂ ಪೆರ್ಡೂರು ಶ್ರೀ ರಾಮಚಂದ್ರ ಕುಂಜಿತ್ತಾಯರಿಂದ ನಾಗದರ್ಶನ ನಡೆಯಲಿದೆ.

Manila Sridhama

Manila Sridhama

Manila Sridhama

ಆಗಸ್ಟ್ 24  ಶುಕ್ರವಾರದ  ಕಾರ್ಯಕ್ರಮಗಳು

Manila Sridhama

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English