ನವದೆಹಲಿ: ದೇಶದ ಐಟಿ ಹರಿಹಾರ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 74 ನೇ ಜನ್ಮದಿನೋತ್ಸವ ಇಂದು. ಅವರ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಗೌರವ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನ ಟ್ವೀಟ್ ಮಾಡುವ ಮೂಲಕ ಸ್ಮರಿಸಿಕೊಂಡಿದ್ದಾರೆ.
ಈನಡುವೆ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನದ ಹಿನ್ನೆಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ನೆನಪಿಸಿಕೊಂಡಿದ್ದಾರೆ. ಕರುಣೆ ಹಾಗೂ ಶಾಂತಿಯ ಪ್ರತೀಕವಾಗಿ ನನ್ನ ತಂದೆ ನನ್ನ ಬದುಕಿನಲ್ಲಿ ಆಳವಾದ ಶೂನ್ಯವನ್ನ ನಿರ್ಮಿಸಿ ಹೊರಟು ಹೋದರು ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ, ನಾನು ಅವರೊಂದಿಗೆ ಆಚರಿಸಿದ ಜನ್ಮದಿನಗಳನ್ನ ಆಚರಿಸಿದ್ದನ್ನ ನೆನಪು ಮಾಡಿಕೊಳ್ಳುವ ಸಮಯ ಬಂದಿದೆ. ಅವರೊಂದಿಗೆ ಆಚರಿಸಿಕೊಂಡ ಜನ್ಮದಿನಗಳನ್ನ ಆಚರಿಸಿಕೊಂಡ ನಾನೇ ಅದೃಷ್ಟವಂತ ಎಂದು ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಾಯಿ ಸೋನಿಯಾ, ಸಹೋದರಿ ಪ್ರಿಯಾಂಕ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜೀವ್ ಗಾಂಧಿ ಸಮಾಧಿ ಸ್ಥಳ ವೀರಭೂಮಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಈ ನಡುವೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಟ್ವೀಟ್ ಮೂಲಕ ರಾಜೀವ್ ಗಾಂಧಿಗೆ ಗೌರವ ಸಲ್ಲಿಕೆ ಮಾಡಿದ್ದಾರೆ.
Click this button or press Ctrl+G to toggle between Kannada and English