ಹಾಸನ: ನೆರೆ ಸಂತ್ರಸ್ತರ ಶಿಬಿರದಲ್ಲಿ ಅಮಾನವೀಯ ನಡೆ ತೋರಿದ್ದ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರ ವರ್ತನೆಗೆ ನೆಟಿಜನ್ಸ್ಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗೆ ಹಾಸನದ ರಾಮನಾಥಪುರ ಸಂತ್ರಸ್ತರ ಶಿಬಿರಕ್ಕೆ ಸಚಿವ ಹೆಚ್ ಡಿ ರೇವಣ್ಣ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಶಿಬಿರದಲ್ಲಿ ಸಂತ್ರಸ್ತರ ಕೈಗೆ ಬಿಸ್ಕೇಟ್ ಪ್ಯಾಕ್ ಕೊಡುವ ಬದಲು ಮೈಮೇಲೆ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿರುವ ನೆಟಿಜೆನ್ಸ್ ಸಚಿವ ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ. ಅವರ ಈ ನಡೆಯನ್ನು ಜನರು ಖಂಡಿಸಿದ್ದಾರೆ.
Click this button or press Ctrl+G to toggle between Kannada and English