ಮಂಗಳೂರು : ನೆರೆಯ ರಾಜ್ಯ ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆ ಅಲ್ಲದೆ ಪಶ್ಚಿಮ ಘಟ್ಟದ ತಪ್ಪಲಿನ ಅನೇಕ ಕಡೆಗಳಲ್ಲಿ ಭೀಕರ ಮಳೆಯಿಂದ ಉಂಟಾಗಿರುವ ಪ್ರಕೃತಿ ವಿರೋಪ ಹಾಗೂ ವ್ಯಾಪಕ ಹಾನಿಗೊಳಗಾದ ಸಂತ್ರಸ್ತರ ನೆರವಿಗಾಗಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಇಂದು ನೆರೆಪರಿಹಾರ ನಿಧಿಯ ಹುಂಡಿಯನ್ನು ಸ್ಥಾಪಿಸಲಾಯಿತು.
ದೇವಳ ಹಿರಿಯ ಅರ್ಚಕ ರಾಮ ಅಡಿಗರು ಸಂತ್ರಸ್ತರ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎ.ಜೆ. ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಎಸ್. ಪ್ರದೀಪ ಕುಮಾರ ಕಲ್ಕೂರ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಸುಂದರ್ ಶೆಟ್ಟಿ, ಅಶೋಕ ಡಿ.ಕೆ., ಸುರೇಶ್ ಕುಮಾರ್, ದಯಾಕರ ಮೆಂಡನ್, ದಿನೇಶ್ ದೇವಾಡಿಗ, ರಂಜನ್ ಕುಮಾರ್, ಪುಷ್ಪಲತಾ ಶೆಟ್ಟಿ, ಚಂದ್ರಕಲಾ ದೀಪಕ್ ರಾವ್, ಅರುಣ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English