ಮಂಗಳೂರು : ನಗರದ ಹಂಪನಕಟ್ಟೆಯ ಗೋಕುಲ್ ಮಾರ್ಕೆಟ್ ಬಿಲ್ಡಿಂಗ್ನಲ್ಲಿರುವ ಪ್ರಸಿದ್ದ `ಅಂಬಿಟ್’ ಕಂಪ್ಯೂಟರ್ ಮತ್ತು ತಾಂತ್ರಿಕ ತರಬೇತಿ ಸಂಸ್ಥೆಯ ವತಿಯಿಂದ 64ನೇ ಸ್ವಾತಂತ್ರೋತ್ಸವದ ಅಂಗವಾಗಿ ಏರ್ಪಡಿಸಲಾದ ಪ್ರಥಮ ವಾರ್ಷಿಕ `ಅಂಬಿಟ್’ ಕಿರು ಚಲನಚಿತ್ರ (AMBIT-Short Film Competition) ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸ್ಪರ್ಧೆಯು 28 ಆಗಸ್ಟ್ 2010ರಂದು ನಡೆದಿದ್ದು ಅಂಬಿಟ್ ರಾಯಭಾರಿ ಪ್ರಸಾದ್ B.N. ರವರು ಸಂಯೋಜನಾ ಅಧಿಕಾರಿಯಾಗಿ, ಕರ್ನಾಟಕ ಸರಕಾರದ ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ಯ ಅಧೀನ ಸಂಸ್ಥೆ ‘ಕರಾವಳಿ ಬೆಳ್ಳಿ ಮಂಡಲ’ದ ಕಾರ್ಯದರ್ಶಿಯವರಾದ ಹಾಗೂ ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರೊಪೆಸರ್, ಕಲಾವಿದರಾದ ಆಡಿ. ಖ.ಒ. ಶಿವಪ್ರಕಾಶ್ರವರು ಸ್ಪರ್ಧೆಯ ಮುಖ್ಯ ತೀರ್ಪುಗಾರರಾಗಿದ್ದು, ಅನಿಮೇಶನ್ ಚಿತ್ರ ಕಲಾವಿದರಾದ ಶ್ರೀ ಜಯರಾಮ್ ನಾವಡರವರು ಸಹ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಮಂಗಳೂರಿನ ಶ್ರೀವೆಂಕಟರಮಣ ದೇವಾಲಯದ ವೈಭವಪೂರ್ಣ ಇತಿಹಾಸ ಮತ್ತು ಜಗತ್ಪ್ರಸಿದ್ದ ರಥೋತ್ಸವದ ಬಗ್ಗೆ ಬೆಳಕು ಚೆಲ್ಲುವ ಸಿತೇಶ್ ಚಂದ್ರ ಗೋವಿಂದರ, ದಿಯಾ ಪ್ರೊಡಕ್ಷನ್ಸ್ನ ಚಿತ್ರವಾದ ‘The Glory of Lord Shree Veera Venkatesha’ ಚಿತ್ರವು ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಬಗಲಿಗೇರಿಸಿದರೆ, ಬಜ್ಪೆ ವಿಮಾನ ದುರ್ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ನವದಂಪತಿಗಳ ಅಗಲುವಿಕೆಯ ನೋವನ್ನು ಮನಮುಟ್ಟುವಂತೆ ದೃಶ್ಯೀಕರಿಸಿದ ನವೀನ್ ಬೇಕಲ್ರ, ಹೈ ವಿಷನ್ ಪ್ರೊಡಕ್ಷನ್ನ ‘Rabiya’ ಚಿತ್ರವು ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಬಾಚಿತು. ನೃತ್ಯವನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮುಸ್ಲಿಂ ಸಮುದಾಯದ ಹುಡುಗಿಯೊಬ್ಬಳಿಗೆ ಮೊದಲು ಸಮಾಜದಿಂದ ಎದುರಾಗುವ ಅಡೆತಡೆಗಳು, ತಾಯಿಯ ಪ್ರೋತ್ಸಾಹ ಹಾಗೂ ತನ್ನ ದಿಟ್ಟತನದಿಂದ ಅವನ್ನು ಎದುರಿಸಿದಾಗ ಅದೇ ಸಮಾಜದಿಂದ ಸಿಗುವ ಪ್ರೋತ್ಸಾಹದ ಕಥೆಯನ್ನು ಒಳಗೊಂಡ ಜಲೇಶ್ ಮತ್ತು ತಂಡದ ಸಂತ ಎಲೋಸಿಯಸ್ ಕಾಲೇಜು ವಿದ್ಯಾರ್ಥಿಗಳ ಪ್ರೊಡಕ್ಷನ್ಸ್ನ ‘Miss U…’ ‘ ಚಿತ್ರವು ಪ್ರಥಮ ಉತ್ತಮ ಕಲಾಚಿತ್ರ ಪ್ರಶಸ್ತಿ ಪಡೆಯಿತು.
ಕಾರ್ಯಕ್ರಮವನ್ನು ಪ್ರಸಾದ್ B.N. ರವರು ನಡೆಸಿ ಕೊಟ್ಟರು. Dr. S.M. ಶಿವಪ್ರಕಾಶ್ರವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆಯನ್ನು ನೆರವೇರಿಸುತ್ತಾ ಮಾತನಾಡಿದ ಅವರು ಹೆಚ್ಚುತ್ತಿರುವ ಕಿರುಚಲನಚಿತ್ರ ನಿರ್ಮಾಣದ ಆಸಕ್ತಿಯನ್ನು ಪ್ರಶಂಸಿದರು. ಜೊತೆಜೊತೆಗೇ ಪರಿಸರದ ಬಗ್ಗೆ, ಹಸಿರಿನ ಬಗ್ಗೆ ಚಿತ್ರಗಳನ್ನು ನಿರ್ಮಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ವಿಜೇತ ಚಿತ್ರಗಳನ್ನು ‘ಕರಾವಳಿ ಬೆಳ್ಳಿಮಂಡಲ’ ಫಿಲ್ಮ್ ಎಸೋಸಿಯೇಶನ್ನ ಸದಸ್ಯರಿಗೂ ವೀಕ್ಷಣೆಯ ವ್ಯವಸ್ಥೆಯನ್ನು ಮಾಡುವುದಾಗಿ ಘೋಷಿಸಿದರು.
`ಅಂಬಿಟ್ ನ ಶ್ರೀ ಜಗದೀಶ್ರವರು ಕಿರುಚಲನಚಿತ್ರ ನಿರ್ಮಾಣಕ್ಕೆ ತಮ್ಮ ಸಂಸ್ಥೆಯಿಂದ ಸತತ ಪ್ರೋತ್ಸಾಹವಿರುವುದಾಗಿ ಘೋಷಿಸಿದರು.
Click this button or press Ctrl+G to toggle between Kannada and English